ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ನೈರ್ಮಲ್ಯ ಸ್ವಚ್ಚತೆ ಜ್ಞಾನಾರ್ಜನೆಗೆ ಪುಸ್ತಕವಾದ ಬಣ್ಣದ ಚಿತ್ರಗಳು

ಕುಂದಗೋಳ : ಮಕ್ಕಳಿಗೆ ಶೈಕ್ಷಣಿಕ ಪ್ರಗತಿ ಜೊತೆ ಸ್ವಚ್ಚತೆ ಮತ್ತು ಮಿತವ್ಯಯ ನೀರಿನ ಬಳಕೆಗಾಗಿ ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮ ಪಂಚಾಯಿತಿ ಚಿತ್ರಗಳು ಮತ್ತು ನಾಣ್ಣುಡಿಗಳ ಮೂಲಕ ಅರಿವು ಮೂಡಿಸುತ್ತಿದೆ.

ಅಲ್ಲಾಪೂರ ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನ ರಡ್ಡೇರ್ ಮಕ್ಕಳಿಗೆ ಜ್ಞಾನಾಭಿವೃದ್ಧಿಗೆ ನೆರವಾಗಲು ಶುದ್ಧ ಕುಡಿಯುವ ನೀರಿನ ಘಟಕದ ಮೇಲೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಚಿತ್ರಗಳು, ಸ್ವಚ್ಚತೆ ಪ್ರತಿಬಿಂಬ ಬಿಂಬಿಸಲು ನೈರ್ಮಲ್ಯ ಗ್ರಾಮದ ಚಿತ್ರ ಹಾಗೂ ನೀರಿನ ಮಿತ ಬಳಕೆಗಾಗಿ ನಾಣ್ಣುಡಿ ಚಿತ್ರ ಬಿಡಿಸಿ ಗ್ರಾಮದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಒಟ್ಟಾರೆ ಗ್ರಾಮೀಣ ಭಾಗದಲ್ಲಿ ಚಿತ್ರಗಳ ಮೂಲಕ ಮಕ್ಕಳು ಮತ್ತು ನಾಗರೀಕರಿಗೆ ಅರಿವು ಮೂಡಿಸುತ್ತಿರುವ ಕಾರ್ಯಕ್ಕೆ ಅಧಿಕಾರಿಗಳು ಸಾಥ್ ನೀಡಿದ್ದು ಗ್ರಾಮದಲ್ಲಿ ಅಭಿವೃದ್ಧಿ ಪರಿಸರದ ಬದಲಾವಣೆ ಆರಂಭವಾಗಿದೆ.

Edited By : Manjunath H D
Kshetra Samachara

Kshetra Samachara

12/10/2021 12:14 pm

Cinque Terre

25.44 K

Cinque Terre

0

ಸಂಬಂಧಿತ ಸುದ್ದಿ