ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಯ್ಯೋ ದುರ್ವಿಧಿಯೇ ನಿನೆಷ್ಟು ಕ್ರೂರಿ: ಇದ್ದೊಬ್ಬ ಮಗನೂ ಇಲ್ಲ ಕೆಲಸವೂ ಇಲ್ಲ ಏನಿದು ನಿನ್ನ ಆಟ

ಪಬ್ಲಿಕ್ ನೆಕ್ಸ್ಟ್ ಮಲ್ಲೇಶ ಸೂರಣಗಿ

ಹುಬ್ಬಳ್ಳಿ: ಆ ಚಂದದ ಕುಟುಂಬಕ್ಕೆ ವಿಧಿಯಾಟ ಒಂದು ಕಡೆಯಾದರೇ ಮತ್ತೊಂದು ಕಡೆಗೆ ಅಧಿಕಾರಗಳ ನಾಟಕೀಯ ಭರವಸೆಯ ಆಟ ಮತ್ತೊಂದೆಡೆ. ಇಂತಹ ಆಟಗಳಿಂದ ಇಲ್ಲೊಂದು ಕುಟುಂಬ ತನ್ನ ಅಸ್ಥಿತ್ವವನ್ನೇ ಕಳೆದುಕೊಂಡು ಮಹಿಳೆಯೊಬ್ಬಳ ಜೀವನ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಅಯ್ಯೋ ಧುರ್ವಿದಿಯೇ ನಿನೆಷ್ಟು ಕ್ರೂರಿ..

ಇದ್ದೊಬ್ಬ ಮಗನನ್ನು ಮುಂದಿಟ್ಟುಕೊಂಡು ಹೋಮ್ ಗಾರ್ಡ್ ಕೆಲಸ ಮಾಡುವ ಮೂಲಕ ತನ್ನ ಕುಟುಂಬವನ್ನು ಮುನ್ನೆಡೆಸುತ್ತಿದ್ದ ತಾಯಿ ಈಗ ಮಗನನ್ನು ಕಳೆದುಕೊಂಡು, ಇರುವ ಜೀವನಾಧಾರ ಕೆಲಸವನ್ನು ಕಳೆದುಕೊಂಡು ಈಗ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾಳೆ. ತಿನ್ನುವ ತುತ್ತು ಅನ್ನಕ್ಕೂ ಪರದಾಡುವಂತಾಗಿದ್ದು, ಸಂಬಂಧಿಕರ ಮುಂದೆ ಕೈ ಚಾಚದೇ ಹಸಿವಿನಲ್ಲಿಯೇ ಸ್ವಾಭಿಮಾನದ ಬದುಕನ್ನು ಮುನ್ನುಡುತ್ತಿದ್ದಾಳೆ. ಹುಬ್ಬಳ್ಳಿಯ ಸರಸ್ವತಿ ಕಳ್ಳಿ ಎಂಬುವ ತಾಯಿಯೇ ಕಷ್ಟದ ಬದುಕಿನಲ್ಲಿ ಕಣ್ಣೀರು ಹಾಕುತ್ತಿದ್ದಾಳೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಮಗ ಅರುಣಕುಮಾರ್ ಅಪಘಾತದಲ್ಲಿ ಸಾವನ್ನಪ್ಪಿದ್ದು, ಈಗ ಮನೆಗೆ ಆಸರೆಯೇ ಇಲ್ಲವಾಗಿದೆ. ಅಲ್ಲದೇ ಹೋಮ್ ಗಾರ್ಡ್ ಕೆಲಸ ಕೂಡ ಇಲ್ಲದೇ ಸರಸ್ವತಿಯ ಕಷ್ಟ ಹೇಳ ತೀರದಾಗಿದೆ. ಕೆಲಸ ಕೊಡಿ ಎಂದು ಎಷ್ಟು ಕೇಳಿದರೂ ಯಾರೊಬ್ಬರೂ ಕೂಡ ಕಿವಿ ಮೇಲೆ ಹಾಕಿಕೊಳ್ಳದೇ ಹರಕೆ ಉತ್ತರ ನೀಡುತ್ತಿದ್ದಾರೆ.

ಅಧಿಕಾರಿಗಳ ಹಾಗೂ ಕಮಾಂಡೆಂಟ್ ಗಳ ನಡೆಯಿಂದ‌ ಈಗ ಕೆಲಸವಿಲ್ಲದೇ ಸರಸ್ವತಿಯವರ ಜೀವನ ಅಲ್ಲೊಲ್ಲ ಕಲ್ಲೋಲವಾಗಿದೆ. ತಿನ್ನಲು ಅನ್ನವಿಲ್ಲದೇ ಅಕ್ಕಪಕ್ಕದ ಮನೆಯವರು ಕೊಡುವ ಆಹಾರವನ್ನೇ ತಿಂದು ಬದುಕಬೇಕಾಗಿದೆ. ಮದುವೆಯ ವಯಸ್ಸಿಗೆ ಬಂದ ಮಗನನ್ನು ಕಳೆದುಕೊಂಡ ತಾಯಿ ಮನೆಯ ಬಾಡಿಗೆ ಕಟ್ಟಲು ಕೂಡ ಹೆಣಗಾಡುವಂತಾಗಿದೆ. ಮನೆಗೆ ಆಸರೆಯಾಗಿದ್ದ ಮಗ, ಜೀವನಕ್ಕೆ ಆಸರೆಯಾಗಿದ್ದ ಕೆಲಸ ಇವೆರಡು ಇಲ್ಲದೇ ಕಣ್ಣೀರು ಸುರಿಸುತ್ತಿದ್ದಾಳೆ.

ಒಟ್ಟಿನಲ್ಲಿ ಈ ತಾಯಿ‌ ಗೋಳು ಕೇಳಿದ ಯಾರಿಗಾದರೂ ಕಣ್ಣೀರು ಬರದೆ ಇರದು. ಆದರೆ ಆ ದೇವರಿಗೆ ಮಾತ್ರ ಇವಳ ಕಷ್ಟ ಕಾಣದೇ ಇದ್ದೊಬ್ಬ ಮಗನನ್ನು ಕಸಿದುಕೊಂಡಿದ್ದಾನೆ. ಅಲ್ಲದೇ ಅಧಿಕಾರಿಗಳಿಗೂ ಇವಳ ನೋವು ಕಾಣದೇ ಇವಳ‌ ಕೆಲಸಕ್ಕೂ ಕಲ್ಲು ಹಾಕಿದ್ದಾರೆ. ಇದೆಲ್ಲವನ್ನೂ ನೆನೆದು ತಾಯಿ ಅಯ್ಯೋ ದುರ್ವಿಧಿಯೇ‌ ನಿನೆಷ್ಟು ಕ್ರೂರಿ ಎಂದು ಕಣ್ಣೀರು ಸುರಿಸುತ್ತಿದ್ದಾಳೆ.

ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Shivu K
Kshetra Samachara

Kshetra Samachara

09/10/2021 05:14 pm

Cinque Terre

30.46 K

Cinque Terre

7

ಸಂಬಂಧಿತ ಸುದ್ದಿ