ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅರಳು ಹುರಿದಂತೆ ಶ್ಲೋಕ ಹೇಳಬಲ್ಲ 14ರ ಈ ಪೋರ

ಧಾರವಾಡ: ಈತ ಇನ್ನೂ 6ನೇ ತರಗತಿ ಓದುತ್ತಾನೆ, ಆದ್ರೆ ಜ್ಞಾನ ಮಾತ್ರ ಅಗಾಧ, ಧಾರವಾಡ ಬೇಂದ್ರೆ ನಗರದಲ್ಲಿ ನೆಲೆಸಿರುವ ಬಾಲಕನೋರ್ವ 1100 ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ಫಟಾ ಫಟ್​ ಉತ್ತರಿಸುವ ಮೂಲಕ ಕರ್ನಾಟಕ ಅಚೀವರ್ ಬುಕ್ ಆಫ್​ ರೆಕಾರ್ಡ್​ನಲ್ಲಿ ಹೆಸರು ಮಾಡಿದ್ದಾನೆ.

ಹೀಗೆ ಪಟಪಟನೆ ಅರಳು ಹುರಿದಂತೆ ಮಾತನಾಡುವ ಈ ಬಾಲಕನ ಹೆಸರು ಸಮರ್ಥ ಮಹೇಶ್ ಪ್ರಸಾದ. ಧಾರವಾಡ ಬೇಂದ್ರೆ ನಗರದ ಜ್ಯೋತಿ ಮಹೇಶ್ ಪ್ರಸಾದ್ ಹಾಗೂ ಮಹೇಶ್ ಪ್ರಸಾದ್ ದಂಪತಿ ಏಕೈಕ ಪುತ್ರ. ಈಗಿನ್ನೂ 14 ವಯಸ್ಸು ಆದರೆ ಸಾಧನೆ ಮಾತ್ರ ಅದ್ವಿತೀಯ.

ಸಮರ್ಥ ಮಹೇಶ್​ ಪ್ರಸಾದ್ ಎಂಬಾತ ತನ್ನ ಅಗಾಧ ನೆನಪಿನ‌ ಶಕ್ತಿಯಿಂದ ಬರೋಬ್ಬರಿ 1100, ಪ್ರಶ್ನೆಗಳಿಗೆ ಉತ್ತರಿಸುವುದಷ್ಟೇ ಅಲ್ಲದೆ, 10 ನಿಮಿಷದಲ್ಲಿ 110 ಸಂಸ್ಕೃತ ಶ್ಲೋಕಗಳನ್ನು ಹೇಳುವ ಮೂಲಕ ಕರ್ನಾಟಕ ಅಚೀವರ್ ಬುಕ್ ಆಫ್​ ರೆಕಾರ್ಡ್​ನಲ್ಲಿ ಹೆಸರು ದಾಖಲಿಸಿದ್ದಾನೆ. ಇನ್ನು ಬಾಲಕನ ತಾಯಿ ಜ್ಯೋತಿ ಮಹೇಶಪ್ರಸಾದ್ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿಯೇ ಈತನಿಗೆ ವಿಶೇಷ ಜ್ಞಾನ ಇರುವುದು ಗಮನಕ್ಕೆ ಬಂದಿದ್ದರಿಂದ ಆವಾಗಿನಿಂದಲೇ ಆತನಿಗೆ ಸಾಮಾನ್ಯ ಜ್ಞಾನದ ಕುರಿತು ಪ್ರಶ್ನೆ ಕೇಳೋದು, ಸಾಮನ್ಯ ವಿಷಯಕ್ಕೆ ಸಂಬಂಧಿಸಿದಂತೆ ತರಬೇತಿ ನೀಡಲು ಪ್ರಾರಂಭ ಮಾಡಿದ್ದೇವೆ ಎಂದರು.

ಚಿಕ್ಕ ವಯಸ್ಸಿನಲ್ಲಿ ಈ ಬಾಲಕನ ಸಾಧನೆ ನೋಡಿದ್ರೆ ಇಂದಿನ ಯುವಕರಿಗೆ ಮಾದರಿ ಆಗಿದ್ದಾರೆ. ಈ ಸಮರ್ಥನ ಸಾಧನೆ ಹೀಗೇ ಮುಂದುವರೆಯಲಿ ಎಂಬುವುದು ನಮ್ಮ ಹಾರೈಕೆ.

Edited By : Shivu K
Kshetra Samachara

Kshetra Samachara

06/10/2021 04:33 pm

Cinque Terre

26.02 K

Cinque Terre

7

ಸಂಬಂಧಿತ ಸುದ್ದಿ