ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಮಲ್ಲಗಂಬ ಮಣಿಸಲು ರಾಜ್ಯ ಮಟ್ಟದ ಸ್ಪರ್ಧೆಗೆ ಸಿದ್ಧರಾದ ಹಳ್ಳಿ ಮಕ್ಕಳು

ಕುಂದಗೋಳ : ಭಾರತೀಯ ಸಂಸ್ಕೃತಿಯ ಮೂಲ ಕಲೆ ಮಲ್ಲಗಂಬದ ಮೂಲಕ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಿಂಚಬೇಕೆಂಬ ಮಹದಾಸೆ ಹೊತ್ತು, ಇಲ್ಲೋಂದಿಷ್ಟು ಜನ ಹಳ್ಳಿ ಮಕ್ಕಳು ಮಲ್ಲಗಂಬ ಮಣಿಸಲು ನಿರಂತರ ಶ್ರಮ ಸಾಧಿಸಿ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಗೆ ಸಜ್ಜಾಗಿದ್ದಾರೆ.

ಅಪ್ಪಟ ದೇಶಿ ಕಲೆಗಳಲ್ಲಿ ಒಂದಾದ ಮಲ್ಲಗಂಬ ಕಲೆಯನ್ನು ರಾಷ್ಟ್ರ ಮಟ್ಟದಲ್ಲಿ ಪ್ರದರ್ಶಿಸಲು ಮೊದಲ ಮೆಟ್ಟಿಲಾಗಿ ರಾಜ್ಯಮಟ್ಟದ ಸ್ಪರ್ಧೆ ನಡೆಯಲಿದ್ದು, ನಿರಂತರ ಪ್ರಯತ್ನದ ಮೂಲಕ ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದ ನಾಲ್ಕನೇ ತರಗತಿಯಿಂದ ಪಿಯುಸಿ ಓದುತ್ತಿರುವ ಸರ್ಕಾರಿ ಶಾಲೆಯ 13 ವಿದ್ಯಾರ್ಥಿಗಳು ಸ್ಪರ್ಧೆ ದಾರಿ ಕಾಯುತ್ತಿದ್ದಾರೆ.

ಕಮಡೊಳ್ಳಿ ಗ್ರಾಮದ ಮಲ್ಲಗಂಬ ಪಟು ಸರ್ಕಾರಿ ಶಾಲೆ ಶಿಕ್ಷಕ ಸಿದ್ಧಾರೂಢ ಹೂಗಾರ. ಈ ಮಕ್ಕಳಿಗೆ ತರಬೇತಿ ನೀಡಿದ್ದು 13 ಜನ ಮಕ್ಕಳು ಸತತ ಪ್ರಯತ್ನದ ಜೊತೆ ಬೆಟ್ಟದಷ್ಟು ನೀರೀಕ್ಷೆ ಹೊತ್ತು ರಾಜ್ಯ ಮಟ್ಟದ ಪಂದ್ಯಕ್ಕಾಗಿ ಲಕ್ಷ್ಮೇಶ್ವರಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಇವರ ಈ ಗೆಲುವಿನ ಪಯಣಕ್ಕೆ ಕುಂದಗೋಳ ತಾಲೂಕಿನ ಜನತೆ ಅಗತ್ಯ ಸಹಕಾರ ನೀಡಿದ್ದು ಪಬ್ಲಿಕ್ ನೆಕ್ಸ್ಟ್ ಮೂಲಕ ಮತ್ತೋಮ್ಮೆ ಈ ಮಕ್ಕಳು ಗೆದ್ದು ಬರಲೇಂದು ಮತ್ತೋಮ್ಮೆ ಹಾರೈಸೋಣ.

Edited By : Manjunath H D
Kshetra Samachara

Kshetra Samachara

19/09/2021 09:44 pm

Cinque Terre

74.38 K

Cinque Terre

11

ಸಂಬಂಧಿತ ಸುದ್ದಿ