ಧಾರವಾಡ: ಇಂದು ನಾಡಿನಾದ್ಯಂತ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಬ್ಬದಂದೇ ಧಾರವಾಡದಲ್ಲಿ ನಾಗರ ಹಾವೊಂದನ್ನು ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದೆ.
ಹೌದು! ಪುರಾಣಗಳಲ್ಲಿ ವಿವಿಧ ಹೆಸರಿನ ಹಾಗೂ ಕಾಲಘಟ್ಟದಲ್ಲಿ ಬರುವ ವಿಷಕಾರಿ ಹಾವುಗಳ ಬಗ್ಗೆ ಉಲ್ಲೇಖವಿದೆ.
ಇವುಗಳ ತಂಟೆಗೆ ಹೋದರೆ ಸಾವು ಖಚಿತ. ಇಂತಹ ಹಾವುಗಳನ್ನು ಹಿಡಿದು ಅವುಗಳನ್ನು ರಕ್ಷಿಸಿ ಕಾಡಿಗೆ ಬಿಡುವುದರಲ್ಲಿ ರಾಜ್ಯದ ಸ್ನೇಕ ಶ್ಯಾಮ್, ಬೆಳ್ಳಿ ಪ್ರಕಾಶ್ ಮತ್ತು ವಾ.ವಾ.ಸುರೇಶ ಅವರ ಹೆಸರು ಹೆಚ್ಚಾಗಿ ಕೇಳಿಬರುತ್ತದೆ. ಆದರೆ ಧಾರವಾಡದಲ್ಲೊಬ್ಬರು ಸುಮಾರು 4500 ಹಾವುಗಳನ್ನು ಹಿಡಿದು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಅವರೇ ಸ್ನೇಕ್ ನಜೀರ್.
ಹಾವು ಹಿಡಿಯುವುದು ಒಂದು ಕಲೆ. ಅದೆಷ್ಟೋ ಜನ ಹಾವು ಹಿಡಿಯಲು ಹೋಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಧಾರವಾಡದ ನಜೀರ್ ಶೇಕ್ ಎಂಬ ಉರಗ ತಜ್ಞ ತನ್ನ ಜೀವಮಾನದಲ್ಲಿ ಸುಮಾರು 4500 ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
ಇದಕ್ಕೆ ಧಾರವಾಡದಲ್ಲಿ ನಡೆದ ಹಾವಿನ ರಕ್ಷಣೆಯೇ ಜೀವಂತ ಉದಾಹರಣೆ. ನಗರದ ತಪೋವನಕ್ಕೆ ಹೊಂದಿಕೊಂಡು ಬೈಪಾಸ್ ಬಳಿಯಿರುವ 70 ಆಡಿ ಬಾವಿಯಲ್ಲಿ 6 ತಿಂಗಳ ಹಿಂದೆ ನಾಗರಹಾವೊಂದು ಆಯತಪ್ಪಿ ಬಿದ್ದಿದೆ.
ಕಳೆದ 6 ತಿಂಗಳಿನಿಂದ ಹೊರ ಬರಲಾಗದೆ ಆಹಾರವೂ ಇಲ್ಲದೇ ವಿಲಿವಿಲಿ ಒದ್ದಾಡುತ್ತಿತ್ತು. ಯಾರೂ ಸಹ ಅದನ್ನು ರಕ್ಷಿಸುವುದಕ್ಕೆ ಮುಂದಾಗಿರಲಿಲ್ಲ. ಆದರೆ, ಸ್ನೇಕ್ ನಜೀರ್ ಇಂದು ಹಗ್ಗದ ಮೂಲಕ ಬಾವಿಗೆ ಇಳಿದು ಹಾವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
Kshetra Samachara
12/08/2021 12:16 pm