ಹುಬ್ಬಳ್ಳಿ- ಇಡೀ ರಾಜ್ಯ ಮಾರಕ ಕೊರೋನಾ ವೈರಸ್ ನಿಂದ ತತ್ತರಿಸುತ್ತಿದ್ದು, ಇಂತಹ ಹೊತ್ತಿನಲ್ಲೇ ವೈರಸ್ ಭೀತಿ ಹೊರತಾಗಿಯೂ ನಗರದ ಕಾಂಗ್ರೆಸ್ ಮುಖಂಡರೊಬ್ಬರು ಅನಾಥ ಶವವನ್ನು ಸಮಯಕ್ಕೆ ಸರಿಯಾಗಿ, ಕಿಮ್ಸ್ ಗೆ ರವಾನಿಸಿ ಶವ ಸಂಸ್ಕಾರ ಮಾಡಲು ಅನುವು ಮಾಡಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ನಗರದ ಘಂಟಿಕೇರಿ ಓಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಜೋಳದ ಓಣಿಯ ನಿವಾಸಿ ಸಿದ್ದಪ್ಪ ಎಂಬುವವರು ಮೃತಪಟ್ಟಿದ್ದರು. ಇವರಿಗೆ ಹಿಂದೆ ಮುಂದೆ ಯಾರು ಇಲ್ಲದ ಕಾರಣ ಮೃತರ ಸಂಸ್ಕಾರ ಮಾಡಲು ಯಾರು ಮುಂದೆ ಬಂದಿದಿಲ್ಲಾ. ಹಾಗಾಗಿ ಸ್ಥಳಕ್ಕೆ ಭೇಟಿ ನೀಡಿದ ನಿರಂಜನಯ್ಯ ಹಿರೇಮಠ ಪೊಲೀಸರಿಗೆ ಕರೆ ಮಾಡಿ ಮೃತರ ಶವವನ್ನು ಕಿಮ್ಸ್ ಗೆ ರವಾನಿಸಲು ಸಹಾಯ ಮಾಡಿದರು. ಕಾಂಗ್ರೆಸ್ ಮುಖಂಡನ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
Kshetra Samachara
08/08/2021 12:32 pm