ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೀರಯೋಧನ ಆಗಮನ ಗುರುವಿನಹಳ್ಳಿಯಲ್ಲಿ ಮನೆ ಮಾಡಿದ ಸಂಭ್ರಮ

ಕುಂದಗೋಳ : ಎಲ್ಲೆಡೆ ಬೋಲೋ ಭಾರತ್ ಮಾತಾಕಿ ಎಂಬ ಘೋಷವಾಕ್ಯ, ಆಕಾಶಕ್ಕೆ ಮುಖ ಮಾಡಿ ಹಾರುತ್ತಿದ್ದ ತ್ರಿವರ್ಣ ಧ್ವಜ ಹಿಡಿದ ಚಿಣ್ಣರ ಮುಖಗಳಲ್ಲಿ ಇದ್ದ ಸಂಭ್ರಮ, ಕುಟುಂಬದವರಲ್ಲಿ ಗ್ರಾಮದ ಹಿರಿಯರು ನಾಗರೀಕರ ಮುಖದಲ್ಲಿ ಹೆಮ್ಮೆ.

ಹೌದು ! ಇಷ್ಟೆಲ್ಲಾ ಸುಸಂದರ್ಭಗಳು ಕಂಡು ಬಂದಿದ್ದು ಕುಂದಗೋಳ ತಾಲೂಕಿನ ಗುರವಿನಹಳ್ಳಿ ಗ್ರಾಮದಲ್ಲಿ, ವೀರಯೋಧ ಗ್ರಾಮದ ಗದಿಗೆಪ್ಪ, ವೀರಪ್ಪ ಹುಬ್ಬಳ್ಳಿ ಸತತ ಹದಿನೇಳು ವರ್ಷಗಳ ಕಾಲ ಭಾರತಾಂಬೆಗೆ ಸೇವೆ ಸಲ್ಲಿಸಿ ವೃತ್ತಿಯಿಂದ ನಿವೃತ್ತಿ ಪಡೆದು ಮರಳಿ ಗ್ರಾಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಗುರವಿನಹಳ್ಳಿಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು.

ದೇಶ ಸೇವೆ ಮುಗಿಸಿ ಗ್ರಾಮಕ್ಕೆ ಮರಳಿದ ವೀರಯೋಧ ಗದಿಗೆಪ್ಪ ಹುಬ್ಬಳ್ಳಿಯವರನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಟ್ರ್ಯಾಕ್ಟರ್ ಮೂಲಕ ಮೆರವಣಿಗೆ ಕೈಗೊಂಡು ಜನರು ಆರತಿ ಎತ್ತಿ ಗ್ರಾಮಕ್ಕೆ ಬರಮಾಡಿಕೊಂಡು ಯೋಧನ ಸಾಧನೆ ಕುರಿತು ಮೆಚ್ಚುಗೆಯ ಮಾತುಗನ್ನಾಡಿ ಹಾರ ಹಾಕಿ ಸನ್ಮಾನಿಸಿ ಸ್ಮರಣಿಕೆ ನೀಡಿ ಗೌರವಿಸಿದರು.

ಈ ವೇಳೆ ಮಾತನಾಡಿದ ವೀರಯೋಧ ಗದಿಗೆಪ್ಪ ಭಾರತಾಂಬೆಯ ಸೇವೆ ಮಾಡುವುದೇ ನಮ್ಮ ಸೌಭಾಗ್ಯ ಅಂತಹ ಸೌಭಾಗ್ಯ ಪಡೆಯಲು ನಾವೆಲ್ಲರೂ ಕರ್ತವ್ಯ ಮಾಡೋಣ ಶ್ರಮ ವಸಿಸೋಣ ಎಂದರು ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಸ್ವಾಮೀಜಿಗಳು ಉಪಸ್ಥಿತರಿದ್ದು ಯುವಕರು ಯೋಧನ ಜೊತೆ ಸೆಲ್ಪಿ ಪಡೆದುಕೊಂಡರು.

Edited By : Shivu K
Kshetra Samachara

Kshetra Samachara

03/08/2021 09:30 am

Cinque Terre

50.44 K

Cinque Terre

9

ಸಂಬಂಧಿತ ಸುದ್ದಿ