ಕಲಘಟಗಿ: ಪಟ್ಟಣದ ಕುರಗುಂದ ದಂಪತಿಗಳು ಉತ್ತರ ಕನ್ನಡ ಜಿಲ್ಲೆಯ ಸುಕ್ಷೇತ್ರ ಉಳವಿ ಜಾತ್ರೆಗೆ ತೆರಳುವ ಭಕ್ತರಿಗೆ ಹತ್ತು ವರ್ಷಗಳಿಂದ ನಿತ್ಯ ದಾಸೋಹ ಏರ್ಪಡಿಸಿ ಸಾರ್ಥಕತೆಯನ್ನು ಕಂಡುಕೊಂಡಿದ್ದಾರೆ.
ಫೆ 27 ರಂದು ಉಳವಿ ಜಾತ್ರೆಜರುಗಲಿದ್ದು,ಜಾತ್ರೆಗೆ ತೆರಳುವ ಭಕ್ತರಿಗೆ ಕಲಘಟಗಿ ಪಟ್ಟಣ ಮಲೆನಾಡಿನ ಹೆಬ್ಬಾಗಿಲು ಎನ್ನಲಾಗುತ್ತದೆ.ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರೂ ಚಕ್ಕಡಿ,ಪಾದಯಾತ್ರೆ ಸೈಕಲ್,ಟ್ರಾಕ್ಟರಗಳಲ್ಲಿ ಕಲಘಟಗಿ ಪಟ್ಟಣದ ಮೂಲಕವೇ ಪ್ರಯಾಣ ಬೆಳೆಸುತ್ತಾರೆ.ಹೀಗೆ ಉಳವಿ ಜಾತ್ರೆಗೆ ಸಾಗುವ ಹಾಗೂ ಮರಳಿ ಬರುವ ಭಕ್ತರಿಗೆ ವಿಶಾಂತ್ರಿ ಹಾಗೂ ದಾಸೋಹ ಮಂಟಪವನ್ನು ಪಟ್ಟಣದ ಹನ್ನೆರಡುಮಠದ ಹತ್ತಿರ ಹುಬ್ಬಳ್ಳಿ ಕಾರವಾರ ಹೆದ್ದಾರಿಗೆ ಹೊಂದಿಕೊಂಡಿರುವ ಜಿ ಟಿ ಮಲ್ಲಪ್ಪನವರ ಜಾಗೆಯಲ್ಲಿ ಸ್ಥಾಪಿಸಿ ಉಳವಿ ಭಕ್ತರಿಗೆ ಅನ್ನದಾಸೋಹ,ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಭಕ್ತರ ದಣಿವು ನಿಗಿಸುವ ಪ್ರಯತ್ನವನ್ನು ತಿಪ್ಪಣ್ಣ ಕುರುಗುಂದ ದಂಪತಿಗಳು ಸತತ ಹತ್ತು ವರ್ಷಗಳಿಂದ ಜನರ ಸಹಕಾರದಿಂದ ಮಾಡುತ್ತಾ ಬಂದಿದ್ದಾರೆ.ವೃತ್ತಿಯಿಂದ ಗ್ಯಾರೇಜ್ ನಡೆಸುವ ತಿಪ್ಪಣ್ಣಕ,ಶರಣ ಸಂಪ್ರದಾಯದಲ್ಲಿ ನಂಬಿಕೆ ಇಟ್ಟಿದ್ದಾರೆ.
ತಿಪ್ಪಣ್ಣ ಕಲಾವಿದರಾಗಿದ್ದು,ಅವರು ರಚಿಸಿರುವ ಉಳವಿ ಚನ್ನಬಸವೇಶ್ವರ ದೇವಸ್ಥಾನ,ಚಕ್ಕಡಿಯ ಪ್ರತಿಕೃತಿಗಳು, ಚನ್ನಬಸವೇಶ್ವರರ, ಜಗಜ್ಯೋತಿ ಬಸವೇಶ್ವರರ ಮಣ್ಣಿನ ಪುತ್ಥಳಿ,ದಾಸೋಹ ದ್ವಾರದಲ್ಲಿನ ಜಿಂಕೆಯ ಪ್ರತಿಕೃತಿಗಳು ಹಾಗೂ ಕಟ್ಟಿಗೆ ರಥ ದಾಸೋಹಕ್ಕೆ ಮತ್ತಷ್ಟು ಮೆರಗು ಹೆಚ್ಚಿಸಿವೆ.
ಕಾಯಕ ಮತ್ತು ದಾಸೋಹದಲ್ಲಿ ನಂಬಿಕೆ ಇಟ್ಟಿರುವ ತಿಪ್ಪಣ್ಣ ದಂಪತಿಗಳು ಭಕ್ತರಿಗೆ ಅನ್ನದಾಸೋಹದ ಜೊತೆಗೆ ಜ್ಞಾನ ದಾಸೋಹವನ್ನು ಉಣಬಡಿಸುವ ಮೂಲಕ ಸಾರ್ಥಕತೆಯನ್ನು ಕಂಡುಕೊಂಡಿದ್ದಾರೆ.
ಮಲ್ಲಿಕಾರ್ಜುನ ಪುರದನಗೌಡರ, ಪಬ್ಲಿಕ್ ನೆಕ್ಸ್ಟ್ ಕಲಘಟಗಿ
Kshetra Samachara
26/02/2021 07:52 pm