ಕಲಘಟಗಿ:ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ವಿಜ್ಞಾನ ವೇದಿಕೆಯಿಂದ ಪರಿಸರ ಕಾಳಜಿಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಮಳೆನೀರು ಸಂರಕ್ಷಣೆ,ತ್ಯಾಜ ನಿರ್ವಹಣೆ ಹಾಗೂ ಶಕ್ತಿ ಸಂಪನ್ಮೂಲಗಳ ಪುನರ್ಬಳಕೆ ಎಂಬ ವಿಷಯದ ಬಿತ್ತಿ ಪತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ಮಹಾವಿದ್ಯಾಲಯದ ಬಿ.ಎಸ್ಸಿ ವಿದ್ಯಾರ್ಥಿಗಳು ಭಿತ್ತಿ ಚಿತ್ರ ಪ್ರದರ್ಶನ ಮಾಡಿ,ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪ್ರಾತ ಅತಿ ಮುಖ್ಯವಾಗಿರುತ್ತದೆ ಎಂದು ವಿವರಿಸಿದರು.
ಈ ವೇಳೆ ಪ್ರಾಂಶುಪಾಲ ಗಂಗಾಧರ ಗುಮ್ಮಗೋಳಮಠ,ಡಾ.ಫರ್ಜಾನ ಪಠಾಣ,ಪ್ರೀತಿ ಪಾಟೀಲ,ಶೈಲಾಜ ಹುದ್ದಾರ,ಸುಜಾತಾ ಮೂಕನಗೌಡ್ರ ಉಪಸ್ಥಿತರಿದ್ದರು.
Kshetra Samachara
23/02/2021 07:26 pm