ಪಬ್ಲಿಕ್ ನೆಕ್ಸ್ಟ್ ವಿಶೇಷ : ಈರಣ್ಣ ವಾಲಿಕಾರ
ಹುಬ್ಬಳ್ಳಿ: ಹೀಗೆ ಹಸಿದ ಜೀವಗಳಿಗೆ ಅನ್ನ ನೀಡುತ್ತಿರುವ ಯುವಕರು, ಹೊಟ್ಟೆ ತುಂಬಾ ಊಟ ಮಾಡಿ ಹಸಿವು ನೀಗಿಸಿಕೊಳ್ಳುತ್ತಿರುವ ನಿರ್ಗತಿಕರು, ಇಂತಹ ದೃಶ್ಯ ಕಂಡು ಬಂದಿದ್ದು ವಾಣಿಜ್ಯ ನಗರಿ ಹುಬ್ಬಳ್ಳಿಯ ಸಿದ್ಧಾರೂಢರ ರೈಲ್ವೆ ನಿಲ್ದಾಣ ಆವರಣದ ಚಿಕ್ಕ ಮೈದಾನದಲ್ಲಿ. ಕರ್ನಾಟಕ ವೆಲ್ಫೇರ್ ಪೀಸ್ ಕೌನ್ಸಿಲ್ ಸಂಸ್ಥೆ ವತಿಯಿಂದ, "ಹಂಗರ್ ಹ್ಯಾಸ್ ನೋ ರಿಲಿಜನ್'' ಎಂಬ ಧ್ಯೇಯವನ್ನು ಇಟ್ಟುಕೊಂಡು, ಕಳೆದು ಹದಿನೈದು ದಿನಗಳಿಂದ ನಿರಂತರವಾಗಿ ಹಸಿದ ಬಡವರಿಗೆ, ಅನಾಥರಿಗೆ, ಕಾರ್ಮಿಕರಿಗೆ ಹಸಿವು ನೀಗಿಸುವ ಮಹತ್ವದ ಕಾರ್ಯ ಮಾಡುತ್ತಿದ್ದಾರೆ.
ಇನ್ನು ದಿನಕ್ಕೆ ನೂರಾರು ಜನರು ಉದ್ಯೋಗ ಅರಸಿ, ಹಳ್ಳಿಯಿಂದ ಹುಬ್ಬಳ್ಳಿಗೆ ಆಗಮಿಸುತ್ತಾರೆ. ಆದರೆ ಅಂದು ಕೆಲಸ ಸಿಗದೇ ತುತ್ತು ಅನ್ನಕ್ಕಾಗಿ ಪರದಾಟವನ್ನು ತಪ್ಪಿಸುವ ಉದ್ದೇಶದಿಂದ, ಮಧ್ಯಾಹ್ನದ ವೇಳೆಯಲ್ಲಿ ಅನ್ನ,ಬೇಳೆ ಸಾರು, ಜೊತೆಗ ಶಿರಾ ಸಹ ನೀಡಿ ಹೊಟ್ಟೆ ತುಂಬಿಸುತ್ತಿರುವುದರಿಂದ ಹಸಿದ ಜೀವಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ದೇಶದಲ್ಲೇ ಜಾತಿ ಭೇದಭಾವ ಮಾಡಿಕೊಂಡು, ಗುದ್ದಾಟ ನಡೆಸಿದ್ರೆ, ಇಲ್ಲೊಂದು ಮುಸ್ಲಿಂ ಸಂಸ್ಥೆ ಹಸಿದವರಿಗೆ ಯಾವ ಜಾತಿ, ನಾವೆಲ್ಲರೂ ಒಂದೇ ಎಂದು ಜಾಗೃತಿಯ ಜೊತೆಗೆ, ಹಸಿವು ನೀಗಿಸುತ್ತಿರುವ ಈ ಸಂಸ್ಥೆಗೆ, ಹ್ಯಾಟ್ಸಾಪ್ ಹೇಳಲೆಬೇಕು. ಮತ್ತು ಸಾಮಾಜಿಕ ಕಾರ್ಯ ಇನ್ನಷ್ಟು ವ್ಯಾಪಿಸಲಿ ಎಂಬುವುದು ಎಲ್ಲರ ಆಶಯ.!
Kshetra Samachara
19/02/2021 05:02 pm