ಕುಂದಗೋಳ : ಇತರರ ಕಷ್ಟಕ್ಕೆ ಕಿವಿಗೊಡದೆ ಸುಮ್ನೇ ನೋಡಿ ನಮ್ಗೆ ಯಾಕೆ ? ಎಂದು ತೆರಳುವವರೇ ಜಾಸ್ತಿ ಇರುವ ಈ ಕಾಲಘಟ್ಟದಲ್ಲಿ ಕರ್ತವ್ಯ ನಿರತ ರೈಲ್ವೆ ಟ್ರ್ಯಾಕ್ ಮ್ಯಾನ್ ಸಮಯ ಪ್ರಜ್ಞೆ ಇಂದು ಒಬ್ಬರ ಜೀವವನ್ನೇ ಕಾಪಾಡಿದೆ.
ನಿನ್ನೆ ರಾತ್ರಿ ಬೆಂಗಳೂರಿನಿಂದ ಹುಬ್ಬಳ್ಳಿ ಎಡೆಗೆ ತೆರುಳುತ್ತಿದ್ದ ರೈಲಿನಲ್ಲಿ ಚಲಿಸುತ್ತಿದ್ದ ಉತ್ತರ ಪ್ರದೇಶದ ಮೂಲದ ವ್ಯಕ್ತಿಯೊಬ್ಬ ಅಚಾನಕ್ಕಾಗಿ ಚಲಿಸುತ್ತಿದ್ದ ರೈಲಿನಿಂದ ಕುಂದಗೋಳ ರೈಲು ನಿಲ್ದಾಣದ ಸಮೀಪದ ಹೊಲದಲ್ಲಿ ಕೆಳಗೆ ಬಿದ್ದು ಗಾಯಗೊಂಡಿದ್ದು ಬೆಳಗಾದ್ರೂ ರಕ್ತದ ಮಡುವಿನಲ್ಲಿ ರೈಲ್ವೆ ಹಳಿ ಪಕ್ಕದಲ್ಲೇ ಬಿದ್ದಿದ್ದಾನೆ.
ಈ ವೇಳೆ ನಿತ್ಯ ಎಂದಿನಂತೆ ಕರ್ತವ್ಯಕ್ಕೆ ತೆರಳಿದ್ದ ರೈಲ್ವೆ ಟ್ರ್ಯಾಕ್ ಮ್ಯಾನ್ ಈಶ್ವರ ಗೌರಿ ಅವರನ್ನು ಗಮನಿಸಿ ನೀರು ಕುಡಿಸಿ ಉಪಾಹಾರ ನೀಡಿದಾಗ ಗಾಯಾಳು ನಿರಾಕರಿಸಿದ್ದಾನೆ ಕೂಡಲೇ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ ರೈಲ್ವೆ ಟ್ರ್ಯಾಕ್ ಮ್ಯಾನ್ ಈಶ್ವರಿ ಗೌರಿ ಸ್ಥಳಕ್ಕೆ ಆಂಬುಲೆನ್ಸ್ ಕರೆಸಿ ಗಾಯಾಳುವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಒಟ್ಟಾರೆ ಮಾನವೀಯತೆ ಮರೆಯಾಗುತ್ತಿರುವ ಈ ಕಾಲದಲ್ಲಿ ರೈಲ್ವೆ ಟ್ರ್ಯಾಕ್ ಮ್ಯಾನ್ ಕಾರ್ಯಕ್ಕೆ ರೈಲ್ವೆ ಸಿಬ್ಬಂದಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Kshetra Samachara
09/02/2021 03:42 pm