ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಿಮ್ಸ್ ಆವರಣದಲ್ಲಿ ಕಂಗೊಳಿಸುತ್ತಿವೆ ಗುಜರಿ ವಸ್ತುಗಳು

ಹುಬ್ಬಳ್ಳಿ: ಆಸ್ಪತ್ರೆಯ ಅಂದವನ್ನು ಹೆಚ್ಚಿಸುವ ಕೆಲಸದಲ್ಲಿ ತಲ್ಲಿಣರಾಗಿರುವ ಸಿಬ್ಬಂದಿ; ನಿರುಪಯುಕ್ತ ವಸ್ತುಗಳಿಂದ ನಿರ್ಮಾಣ ಆಗಿರೋ ಆಕೃತಿಗಳು, ಇಷ್ಟೆಲ್ಲಾ ಸುಂದರವಾದ ಕಲಾಕೃತಿಗಳನ್ನು ಕಂಡು ಸಂತಸ ವ್ಯಕ್ತಪಡಿಸುತ್ತಿರುವ ಸಾರ್ವಜನಿಕರು- ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ವಾಣಿಜ್ಯ ನಗರಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ನರ್ಸರಿ ಉದ್ಯಾನವನದಲ್ಲಿ, ಜನರ ಗಮನವನ್ನು ಸೆಳೆಯುವ ಕಲಾಕೃತಿಗಳನ್ನು ನಿರ್ಮಾಣ ಮಾಡಲಾಗಿದೆ. ರೋಗಿಗಳಿಗೆ ಚಿಕಿತ್ಸೆ ನೀಡುವುದರ ಜೊತೆ ಜೊತೆಗೆ, ಆಸ್ಪತ್ರೆಯ ಅಂದವನ್ನು ಹೆಚ್ಚಿಸುವ ಕೆಲಸವನ್ನು ಮಾಡಲಾಗುತ್ತಿದೆ. ಕಿಮ್ಸ್ ಆಸ್ಪತ್ರೆಯ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ಅವರ ನಿರ್ದೇಶನದಲ್ಲಿ ಕಿಮ್ಸ್ ಆಸ್ಪತ್ರೆಯ ಸೌಂದರ್ಯವನ್ನು ವೈದ್ಯರು, ವಿದ್ಯಾರ್ಥಿಗಳು ಸೇರಿ ಸುಂದರೀಕರಣಗೊಳಿಸುತ್ತಿದ್ದಾರೆ. ಅದರಲ್ಲೂ ಆಸ್ಪತ್ರೆಯಲ್ಲಿ ಕಾರ್ವನಿರ್ವಹಿಸುವ ವೈದ್ಯರ ಮನೆಯಲ್ಲಿರುವ‌ ನಿರುಪಯುಕ್ತ ವಸ್ತುಗಳನ್ನು ಬಳಸಿ, ವಿವಿಧ ಕಲಾಕೃತಿಗಳನ್ನು ರಚನೆ ಮಾಡಲಾಗಿದ್ದು, ಆಸ್ಪತ್ರೆಗೆ ಬರುವ ಜನರ ಗಮನವನ್ನು ಸೆಳೆಯುತ್ತಿವೆ.

ಹೊರದೇಶಗಳಿಗೆ ಹೋದಾಗ ಅಲ್ಲಿ ಕಂಡ ಉದ್ಯಾನವನಗಳನ್ನೇ ಸ್ಪೂರ್ತಿಯಾಗಿ ತೆಗೆದುಕೊಂಡ ವಿಜಯ್ ಕಾಮತ್, ಉದ್ಯಾನವನದಲ್ಲಿ ವಿವಿಧ ಬಗೆಯ ಆಕೃತಿಗಳಿಗೆ ನಿರುಪಯುಕ್ತ ವಸ್ತುಗಳನ್ನು ಬಳಕೆ ಮಾಡಿಕೊಂಡಿದ್ದಾರೆ. ಅದರಲ್ಲೂ ಕಾರಿನ ಟೈರ್ ಗಳನ್ನ ಬಳಸಿ ವಿವಿಧ ಆಕೃತಿಗಳನ್ನು ರಚಿಸಿ ಉದ್ಯಾನವನದ ಅಂದವನ್ನು ಹೆಚ್ಚಿಸಿದ್ದಾರೆ. ಆಸ್ಪತ್ರೆಯ ಆವರಣದಲ್ಲಿ ಬಿದ್ದ ಮರದ ತುಂಡುಗಳನ್ನು ಬಳಸಿಕೊಂಡು ನೀರ್ಜಿವ ಜಿಂಕೆಗಳ ಸೃಷ್ಟಿಸಿದ್ದಾರೆ. ಕಾರಿನ ಟೈರ್ ಮೂಲಕ ಬೈಕ್, ಮೊಲ, ಬೆಕ್ಕು, ಮೀನು, ಸೂರ್ಯ ಸೇರಿದಂತೆ ಹಲವು ಆಕೃತಿಗಳನ್ನು ಮಾಡಲಾಗಿದೆ. ಅಲ್ಲದೇ ಉದ್ಯಾನವನದ ಸುಂದರೀಕರಣಕ್ಕಾಗಿ ಸೈಕಲ್ ಟೈರ್ ಗಳನ್ನ ಬಳಕೆ ಮಾಡಿಕೊಳ್ಳಲಾಗಿದ್ದು, ಆಸ್ಪತ್ರೆಯ ಅಂದವನ್ನು ಕಂಡು ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದು ಹೀಗೆ...

ಹಸಿರು ಹುಲ್ಲುಗಾವಲಿನಲ್ಲಿ ವಿವಿಧ ಆಕೃತಿಗಳಿಂದ ಉದ್ಯಾನವನ ಕಂಗೊಳಿಸುತ್ತಿದೆ. ಸುತ್ತಮುತ್ತಲಿನ ಮರಗಿಡಗಳಿಗೆ, ಗೋಡೆಗಳ ಮೇಲೆ ಕಲಾವಿದರು ಕೈ ಚಳಕ ತೋರಿದ್ದು, ನೈಸರ್ಗಿಕ ಪರಿಸದ ಚಿತ್ರಗಳ ಅನಾವರಣ ಮಾಡಲಾಗಿದೆ. ಸುಂದರ ಉದ್ಯಾನವನವನ್ನ ಆಸ್ಪತ್ರೆಗೆ ಬರುವ ರೋಗಿಗಳು, ರೋಗಿಗಳ ಸಂಬಂಧಿಕರು ಹಾಗೂ ಆಸ್ಪತ್ರೆಯ ವಿದ್ಯಾರ್ಥಿಗಳು ಕಣ್ತುಂಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.......!

Edited By : Manjunath H D
Kshetra Samachara

Kshetra Samachara

08/02/2021 06:34 pm

Cinque Terre

38.31 K

Cinque Terre

6

ಸಂಬಂಧಿತ ಸುದ್ದಿ