ನವಲಗುಂದದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ ಪದಕಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಆರ್.ಕೆ.ಚವ್ಹಾಣ ಅವರನ್ನು ನವಲಗುಂದ ತಾಲೂಕ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ನೂತನ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಗೆ ಆಕ್ಷೇಪಣೆಗಳನ್ನು ಸಲ್ಲಿಸಲಾಯಿತು ಹಾಗೂ ಇಲಾಖೆಯ ಕಾರ್ಯಕ್ರಮಗಳಲ್ಲಿ ಸಕ್ರೀಯ ಸಹಭಾಗಿತ್ವಕ್ಕೆ ಗ್ರಾಮೀಣ ಸಂಘಕ್ಕೆ ಪ್ರಾಶಸ್ತ್ಯ ನೀಡಲು ಮನವಿ ಸಲ್ಲಿಸಲಾಯಿತು.
ಈ ವೇಳೆ ಸಂಘದ ಉಪಾಧ್ಯಕ್ಷರಾದ ಎಸ್. ಬಿ. ಭಜಂತ್ರಿ, ಮಹಿಳಾ ಉಪಾಧ್ಯಕ್ಷರಾದ ಎಸ್.ಡಿ.ಬಾಳೇಕುಂದ್ರಿ, ಪ್ರಧಾನ ಕಾರ್ಯದರ್ಶಿಗಳಾದ ಬಿ.ವ್ಹಿ.ಅಂಗಡಿ, ವಿವಿಧ ಹಂತದ ಪದಾಧಿಕಾರಿಗಳಾದ ಹುಳಕಣ್ಣವರ, ಎಚ್.ಎಫ್. ಸುತಾರ. ವಾಯ್.ಎಫ್. ಕೆಂಪಣ್ಣವರ, ನದಾಫ್, ಎಮ್.ಜಿ.ಬಳ್ಳಾರಿ, ಎಸ್.ಎಮ್.ಬೆಂಚಿಕೇರಿ, ಬಡಿಗೇರ, ಕಲಿಗಾರ, ಶ್ರೀನಿವಾಸ ಅಮಾತೆಣ್ಣವರ, ಎಂ.ಬಿ.ಪವಾಡಶೆಟ್ಟರ, ಡಾ. ಸಿದ್ಧಲಿಂಗೇಶ ಹಂಡಗಿ ಇತರರು ಉಪಸ್ಥಿತರಿದ್ದರು.
Kshetra Samachara
08/02/2021 11:55 am