ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಡತನದಲ್ಲಿ ಅರಳಿದ ಕಲಾವಿದ

ಹುಬ್ಬಳ್ಳಿ: ರವಿವರ್ಮ ಬಿಡಿಸಿದ ಚಿತ್ರವೊ, ಅಮರಶಿಲ್ಪಿ ಜಕನಾಚಾರ್ಯ ಕೆತ್ತಿದ ಶಿಲ್ಪವೋ ಎನ್ನುವಂತೆ ಭಾಸವಾಗುವ ಕಲಾಕೃತಿಗಳು, ಕಾಮನ ಬಿಲ್ಲಿನ ಹೊಳಪನ್ನು ಮೈದೊಡವಿ ತುಂಬಿಕೊಂಡ ಚಿತ್ರಗಳನ್ನು ನೋಡುತ್ತಾ ನಿಂತರೆ ಮೈ ಮರೆಯುವಲ್ಲಿ ಯಾವುದೇ ಅನುಮಾನವಿಲ್ಲ. ಚಿತ್ರಕಲೆಯನ್ನೇ ಉಸಿರಾಗಿಸಿಕೊಂಡು ಅವಿರತ ಶ್ರಮದಿಂದ ಭಿನ್ನ ವಿಭಿನ್ನವಾಗಿ ಹತ್ತು ಹಲವಾರು ಸಂದೇಶ ಸಾರುವ ಚಿತ್ರಗಳನ್ನು ಬಹು ಸುಂದರವಾಗಿ ಚಿತ್ರಿಸುತ್ತಿರುವ ಈ ಯುವಕನ ಹೆಸರು ಸಂತೋಷ ಹಸಬಿ.

ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಮಜ್ಜಿಗುಡ್ಡ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಇವರದು ಕೃಷಿ ಆಧಾರಿತ ಕುಟುಂಬ. ಬಡತನದಲ್ಲಿಯೇ ಜೀವನ ಸಾಗಿಸುವಂತ ವಿಷಮ ಪರಿಸ್ಥಿತಿ ಬಂದೋದಗಿದರು ಚಿತ್ರಕಲೆಯಲ್ಲಿ ಅದೆಂತಹದೋ ಸೆಳೆತ. ಚಿತ್ರಕಲೆಯನ್ನು ಬಾಲ್ಯದಲ್ಲೇ ಆರಾದಿಸುತ್ತಾ ಪ್ರಾಥಮಿಕ ಹಾಗೂ ಪ್ರೌಡ ಶಾಲಾ ಹಂತದಲ್ಲಿ ಓದಿನ ಜೊತೆಗೆ ಕಲೆಯಲ್ಲಿ ಮಗ್ನರಾಗಿ ಪ್ರಶಸ್ತಿಯನ್ನು ಪಡೆದು ಕೊಂಡಿದ್ದರು. ಅಂದುಕೊಂಡ ಕನಸನ್ನು ನನಸಾಗಿಸಿಕೊಳ್ಳಲು ಚಿತ್ರಕಲೆಯಲ್ಲಿಯೇ ಸಾಧನೆ ಮಾಡಬೇಕೆಂಬ ಛಲದಿಂದ ಕಲಾದೇವಿಯನ್ನು ಒಲಿಸಿಕೊಳ್ಳಲು ಹುಬ್ಬಳ್ಳಿಯ ಶ್ರೀ ವಿಜಯ ಮಹಾಂತೇಶ ಲಲಿತ ಕಲಾ ಮಹಾವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ನಾಗಲೋಟ ಕುದುರೆ ಕಲಾಕೃತಿ, ಪಕ್ಷಿ ಸಂಕುಲಗಳ ಸರಣಿ ಹಾಗೂ ಕಲ್ಪನೆ ಆದರಿತ ಚಿತ್ರಗಳಲ್ಲಿ ಇವರು ಮೂರು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಸ್ಟೋಕ್ ವರ್ಕ, ನೈಪ ವರ್ಕ,ಪೇಟಿಂಗ್, ಕ್ಯಾನವಾಸ್ ಪೇಂಟಿಂಗ್, ವಾಟರ ಕಲರ್, ಲ್ಯಾಂಡ ಸೇಪ್ ಹೀಗೆ ಹಲವಾರು ವಿಧಗಳಲ್ಲಿ ಚಿತ್ರಗಳನ್ನು ಚಿತ್ರಿಸುತ್ತಾ,

ಸುಮಾರು 55 ಚಿತ್ರಗಳು ಇವರ ಕುಂಚದಲ್ಲಿ ರೂಪ ಪಡೆದು, ವಯಕ್ತಿಕ ಹಾಗೂ ಕಾಲೇಜಿಗೆ ಹೆಚ್ಚಿನ ಪ್ರಶಸ್ತಿ ತಂದುಕೊಡುವಲ್ಲಿ ಇವರ ಶ್ರಮ ಬಹುದೊಡ್ಡದಾಗಿದೆ.

ಒಟ್ಟಿನಲ್ಲಿ ತನ್ನ ಜೀವನವನ್ನು ಕಲೆಗೆ ಅರ್ಪಿಸಿ ಚಿತ್ರಕಲೆಯನ್ನೇ ಉಸಿರಾಗಿಸಿಕೊಂಡು ಸಾಧನೆಯ ಶಿಖರವೇರಬೇಕೆಂಬುದು ಈ ಕಲೆಗಾರನಿಗಿರುವ ಕನಸು... ಕಲೆಯನ್ನು ಪ್ರೋತ್ಸಾಹಿಸುವ ಹಿತೈಷಿಗಳು ಹಾಗೂ ಕಲಾಭಿಮಾನಿಗಳು ಇವರನ್ನು 8722924536 ಸಂಪರ್ಕಿಸಬಹುದು....

ಈರಣ್ಣ ವಾಲಿಕಾರ,,,,

ಪಬ್ಲಿಕ್ ನೆಕ್ಸ್ಟ

Edited By : Manjunath H D
Kshetra Samachara

Kshetra Samachara

05/02/2021 05:29 pm

Cinque Terre

37.02 K

Cinque Terre

6

ಸಂಬಂಧಿತ ಸುದ್ದಿ