ಧಾರವಾಡ: ಧಾರವಾಡದ ಸೂಪರ್ ಮಾರುಕಟ್ಟೆಯಲ್ಲಿ ಗೂಬೆಯೊಂದು ಗಾಯಗೊಂಡು ಒದ್ದಾಡುತ್ತಿರುವ ಸಂದರ್ಭದಲ್ಲಿ ವ್ಯಾಪಾರಸ್ಥರು ಅದಕ್ಕೆ ನೀರು ಕುಡಿಸಿ ಆರೈಕೆ ಮಾಡಿದ್ದಾರೆ.
ಗೂಬೆ ಎಂದಾಕ್ಷಣ ಇನ್ನೂ ಜನರಲ್ಲಿ ಮೂಢನಂಬಿಕೆಯ ಭಾವ ಮೂಡುತ್ತಿದೆ. ಆದರೆ ಈ ಪಕ್ಷಿಯ ಸಂತತಿ ಅಳಿವಿನ ಅಂಚಿನಲ್ಲಿದೆ.ನೋಡಲು ಮನುಷ್ಯರ ರೀತಿಯೇ ಮುಖ ಹೋಲುವ ಈ ಪಕ್ಷಿಯನ್ನು ವಾಮಾಚಾರಕ್ಕೆ ಬಳಕೆ ಮಾಡುತ್ತಾರೆ ಎಂಬ ಮೂಢನಂಬಿಕೆ ಇದೆ.
ಈ ಪಕ್ಷಿ ಧಾರವಾಡದ ಸೂಪರ್ ಮಾರುಕಟ್ಟೆಯ ತರಕಾರಿ ಮಾರಾಟ ಮಾಡುವ ಸ್ಥಳದಲ್ಲಿ ಪತ್ತೆಯಾಗಿದೆ. ಇದಕ್ಕೆ ಗಾಯವಾಗಿದ್ದು, ಹಾರಲು ಬರದ ಸ್ಥಿತಿಯಲ್ಲಿರುವುದನ್ನು ಕಂಡ ವ್ಯಾಪಾರಸ್ಥರು ಪಕ್ಷಿಯನ್ನು ಹಿಡಿದು ನೀರು ಕುಡಿಸಿ ಆರೈಕೆ ಮಾಡಿದ್ದಾರೆ.
Kshetra Samachara
05/02/2021 01:48 pm