ಕುಂದಗೋಳ : ಭಾರತಾಂಬೆಯ ಮಡಿಲಲ್ಲಿ ಬರೋಬ್ಬರಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಪಡೆದು ಸ್ವ ಗ್ರಾಮಕ್ಕೆ ಮರಳಿದ ರವಿ ಕೇದಾರಪ್ಪ ಕೋಡೆ ಅವರ ಅದ್ದೂರಿ ಸ್ವಾಗತ ಸಮಾರಂಭಕ್ಕೆ ಕಮಡೊಳ್ಳಿ ಗ್ರಾಮ ಸಾಕ್ಷಿಯಾಯಿತು.
ಭಾರತ ದೇಶದ ವಿವಿಧೆಡೆ ಸೇವೆ ಸಲ್ಲಸಿ ಜಮ್ಮು ಕಾಶ್ಮೀರದಿಂದ ಸೇವಾ ನಿವೃತ್ತಿ ಪಡೆದ ಯೋಧ ರವಿ ರೋಡೆ ಅವರಿಗೆ ಕಮಡೊಳ್ಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕೇಸರಿ, ಬಿಳಿ, ಹಸಿರು ಬಲೂನ್ ತೀವರ್ಣ ಧ್ವಜದಿಂದ ಶೃಂಗಾರಗೊಂಡ ವಾಹನದಲ್ಲಿ ಮೆರವಣಿಗೆ ಮಾಡಿ ಹೂಮಳೆ ಸ್ವಾಗತ ಕೋರಲಾಯಿತು.
ಬಳಿಕ ಕಲ್ಯಾಣಪುರ ಬಸವಣ್ಣನವರು ನೇತೃತ್ವದಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಿ ಯೋಧನಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಸಭೆ ಉದ್ದೇಶಿಸಿ ಮಾತನಾಡಿದ ಕಲ್ಯಾಣಪುರ ಬಸವಣ್ಣನವರು ದೇಶ ಸೇವೆ ಮಾಡುವುದೇ ಸೌಭಾಗ್ಯ ಅಂತಹ ಭಾಗ್ಯ ಪಡೆದ ಯೋಧರು ನಿಜಕ್ಕೂ ಆ ಭಾರತಾಂಬೆಯ ಶಕ್ತಿ ಇಂತಹ ಯೋಧರ ಸಂಖ್ಯೆ ಗ್ರಾಮದಲ್ಲಿ ಹೆಚ್ಚಾಗಲಿ ಎಂದರು.
ಯೋಧ ರವಿ ರೋಡೆ ಮಾತನಾಡಿ ಶಾಲಾ ಆರಂಭದ ದಿನಗಳಲ್ಲಿ ಕಷ್ಟದ ದಿನಗಳನ್ನು ಸೋಸಿ ಇಂದು ಯೋಧನಾಗಿ ನಮ್ಮೂರ ಜನರಿಂದ ಇಂತಹ ಗೌರವಕ್ಕೆ ಪಾತ್ರವಾಗಿರುವುದು ಸಂತಸ ತಂದಿದೆ. ನನ್ನ ಸೇವಾ ನಿವೃತ್ತಿಗೆ ನೀವು ನೀಡಿದ ಗೌರವ ಎಂದಿಗೂ ಮರೆಯಲೂ ಸಾಧ್ಯವಿಲ್ಲ ಎಂದರು. ಈ ಸಂದರ್ಭದಲ್ಲಿ ಕಮಡೊಳ್ಳಿ ಗ್ರಾಮದ ಹಿರಿಯರು ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Kshetra Samachara
04/02/2021 07:27 pm