ಕುಂದಗೋಳ : ತಾಲೂಕಿನ ಸಂಶಿ ಗ್ರಾಮದಲ್ಲಿ ಮುದ್ದು ನಾಯಿಗೆ ಸೀಮಂತ ಶಾಸ್ತ್ರ ನೆರವೇರಿಸಿದ ವಿಶೇಷವಾದ ಕಾರ್ಯಕ್ರಮ ಎಲ್ಲರ ಗಮನಸೆಳೆದಿದೆ. ಕಳೆದ ವರ್ಷ ಸಂಶಿ ಗ್ರಾಮದ ರಮೇಶ ಪಡೇತರ ಎಂಬುವವರು ತಮ್ಮ ಮನೆಗೆ ಶ್ವಾನವನ್ನು ತಗೆದುಕೊಂಡು ಬಂದಿದ್ದರು. ಅದಕ್ಕೆ ಲೂಸಿ ಎಂದು ನಾಮಕರಣವನ್ನು ಮಾಡಿದ್ದರು.
ಇದೀಗ ಆ ಶ್ವಾನ ಗರ್ಭ ಧರಿಸಿದೆ ಹೀಗಾಗಿ ಮನೆಯಲ್ಲಿ ನಾಯಿಗೆ ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯ ನೆರವೇರಿಸಿದ್ದಾರೆ. ಸಾರಿಗೆ ನೌಕರ ರಮೇಶ ಪಡತೇರ ಅವರ ಪುತ್ರ ಪೃಥ್ವಿರಾಜ ಪಡತೇರ ಮತ್ತು ಕುಟುಂಬದವರು ಶ್ವಾನಕ್ಕೆ ಸೀಮಂತ ಕಾರ್ಯ ಮಾಡಿದ್ದಾರೆ. ಶ್ವಾನಕ್ಕೂ ಬಳೆ, ಸೀರೆ ಉಡಿಸಿ, ಊಡಿ ತುಂಬಿ,ಹೂವಿನ ಮಾಲೆಯನ್ನು ಹಾಕಿ ಸೀಮಂತ ಕಾರ್ಯ ಮಾಡಿ ಬಡಾವಣೆಯ ಜನ ಮತ್ತು ಪಡತೇರ ಕುಟುಂಬದವರು ಖುಷಿಪಟ್ಟು ಪ್ರಾಣಿ ಪ್ರೀತಿ ಮೆರೆದಿದ್ದಾರೆ.
Kshetra Samachara
03/02/2021 12:10 pm