ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರುದ್ರಭೂಮಿ ಸ್ವಚ್ಛತಾ ಕಾರ್ಯಕ್ಕೆ ಕೈ ಜೋಡಿಸಿದ ಮಹಿಳೆಯರು: ಸಮಾಜ ಸೇವೆಯೇ ನಮ್ಮ‌ ಗುರಿ

ಹುಬ್ಬಳ್ಳಿ: ಉಣಕಲ್ ಅಭಿವೃದ್ಧಿ ಸಂಘ ಈ ಹೆಸರು ಈಗ ಪ್ರತಿಯೊಬ್ಬರ ಬಾಯಿಯಲ್ಲಿಯೂ ಹರಿದಾಡುತ್ತಿದೆ. ಸಮಾಜ ಮುಖಿ ಕೆಲಸಗಳ ಮೂಲಕ ಗುರುತಿಸಿಕೊಂಡ ಸಂಘಟನೆ ಈಗ ಮತ್ತೊಂದು ಮಹತ್ವದ ಕಾರ್ಯಕ್ಕೆ ಮುಂದಾಗಿದೆ.

ಸಾಮಾಜಿಕ ರಂಗದಲ್ಲಿ ಹಲವರು ಸಮಾಜ ಸೇವೆ ಹೆಸರಲ್ಲಿ ಕಾರ್ಯಗಳನ್ನು ಮಾಡುವ ಉಣಕಲ್ ಅಭಿವೃದ್ಧಿ ಸಂಘದವರು ಈಗಾಗಲೇ ಹಲವು ಕೆಲಸ ಮಾಡುವ ಮೂಲಕ ಜನಮನ್ನಣೆ ಪಡೆದಿದ್ದು,ಹುಬ್ಬಳ್ಳಿಯ ದೊಡ್ಡ ಉಣಕಲ್ ಕೆರೆಯನ್ನು ತಿಂಗಳುಗಟ್ಟಲೆ ಶ್ರಮವಹಿಸಿ ಸಂಪೂರ್ಣ ಸ್ವಚ್ಛ ಮಾಡಿದ್ದರು.

ಈಗ ಇದೇ ಸಂಘ ಉಣಕಲ್ ನ ಸದ್ಗುರು ಪರಮ ಪೂಜ್ಯ ಸಿದ್ದಪ್ಪಜ್ಜನ ಹುಟ್ಟು ಹಬ್ಬದ ಅಂಗವಾಗಿ ಡಿಸೆಂಬರ್ 20ನೇ ದಿನಾಂಕದಿಂದ ಪ್ರತಿ ಶನಿವಾರ, ಭಾನುವಾರದಂದು ಸಂಘದ ಸದಸ್ಯರು, ಹಿರಿಯರು ಕೂಡಿಕೊಂಡು ವಿದ್ಯಾನಗರದ ರುದ್ರಭೂಮಿ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಂಡು ನಿರಂತರವಾಗಿ ಎಲ್ಲ ನಾಗರಿಕರಿಗೆ ಒಂದು ಉತ್ತಮ ಸಾಮಾಜಿಕ ಸಂದೇಶ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನೂ ಇಂತಹ ಕೆಲಸಗಳಿಗೆ ಬರುವುದು ದೂರದ ಮಾತು ಇದನ್ನು ನೋಡಿದ ಉಣಕಲ್ ಮಹಿಳೆಯರು ಸ್ವಯಂ ಪ್ರೇರಿತವಾಗಿ ರುದ್ರಭೂಮಿಗೆ ಆಗಮಿಸಿ ಈ ಒಂದು ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಈ ಉಣಕಲ್ ಅಭಿವೃದ್ಧಿ ಸಂಘದ ಜೊತೆಗೆ ಕೈ ಜೋಡಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

01/02/2021 04:45 pm

Cinque Terre

44.15 K

Cinque Terre

5

ಸಂಬಂಧಿತ ಸುದ್ದಿ