ಹುಬ್ಬಳ್ಳಿ: ನಗರದಲ್ಲಿ ಕಸ ವಿಲೇವಾರಿ ಮಾಡಿವುದೇ ಒಂದು ದೊಡ್ಡ ತಲೆನೋವು ಆಗಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ಹಸಿ ತ್ಯಾಜ್ಯ ವಿಲೇವಾರಿಗೆ ಅತ್ಯಾಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿ, ಭೂಗತ ಕಸದ ಡಬ್ಬಿ ಹಾಗೂ ಅತ್ಯಾಧುನಿಕ ವಿಲೇವಾರಿ ವಾಹನ ಸಿದ್ಧಗೊಳಿಸಿದ್ದಾರೆ..
ಹುಬ್ಬಳ್ಳಿಯ ಅಧ್ಯಾಪಕ ನಗರದ ನಿವಾಸಿ ವಿಶ್ವನಾಥ ಪಾಟೀಲ್ ಎಂಬ ವ್ಯಕ್ತಿ ಹಾಗೂ ಸಂಗಡಿಗರು ಸೇರಿಕೊಂಡು, ಕಸ ವಿಲೇವಾರಿಗೆ ಹೊಸ ತಂತ್ರಜ್ಞಾನ ಬಳಸಿಕೊಂಡು, ಕಸ ವಿಲೇವಾರಿಗೆ ಆಧುನಿಕ ಟಚ್ ನೀಡಿದ್ದಾರೆ.
ಭೂಮಿಯೊಳಗೆ ಕಸದ ಡಬ್ಬಿ ನಿರ್ಮಿಸಿ, ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ಅವರು, ತ್ಯಾಜ್ಯ ನಿರ್ವಹಣೆಗೆ ಬೇಕಾದ ಅಗತ್ಯ ವಾಹನವೊಂದನ್ನು ಸಜ್ಜುಗೊಳಿಸಿದ್ದಾರೆ. ಸಮಾನ ಮನಸ್ಕರೊಂದಿಗೆ ಸ್ವಚ್ಛ ಸ್ವಸ್ಥ ಟ್ರಸ್ಟ್ ರಚಿಸಿಕೊಂಡ ಇವರು, ಸತತ ನಾಲ್ಕು ವರ್ಷಗಳ ಪ್ರಯೋಗದ ಪರಿಣಾಮ ಸುಸಜ್ಜಿತ ವ್ಯವಸ್ಥೆಯೊಂದು ಸಿದ್ಧಗೊಳಿಸಿದ್ದಾರೆ.
ಇನ್ನು ನಗರದಲ್ಲಿ ಕಸ ವಿಲೇವಾರಿ ಮಾಡುವ ವಾಹನದಿಂದ ಬರುವ ವಾಸನೇ ಅಥವಾ ಇನ್ನಿತರ ಸಮಸ್ಯೆ ಈ ವಾಹನದಲ್ಲಿ ಇರುವುದಿಲ್ಲ. ಅದೇ ರೀತಿ ಮೊದಲ ಹಂತದಲ್ಲಿ ವಾಸನೆ ಸುತ್ತಲಿನ ಪರಿಸರದಲ್ಲಿ ಗಲೀಜು ಉಂಟಾಗದಂತೆ ಭೂಮಿಯಲ್ಲಿ ಡಸ್ಟ್ ಬಿನ್ ವ್ಯವಸ್ಥೆಕಲ್ಪಿಸುವಲ್ಲಿ ಸಫಲರಾಗಿದ್ದಾರೆ.
ವಾಹನದ ವಿಶೇಷತೆ, ಭೂಮಿಯೊಳಗಿರುವ ಕಸದ ಡಬ್ಬಿಯನ್ನು ಸುಲಭವಾಗಿ ತಗೆದುಕೊಳ್ಳುವುದು, ನಂತರ ಯಥಾಸ್ಥಿತಿಗೆ ಕಸದ ಡಬ್ಬಿಯನ್ನು ಇಡುವುದು ಸೇರಿದಂತೆ, ಪ್ರತಿಯೊಂದು ಕಾರ್ಯವನ್ನು ಯಂತ್ರವೆ ನಿರ್ವಹಿಸುತ್ತದೆ. ನಿತ್ಯ 500 ಮನೆಯ ಕಸ ಸಾಗಿಸಬಹುದು ಹಸಿ ತಾಜ್ಯವಾಗಿರುವುದರಿಂದ ಒಳಗಿನ ನೀರಿನ ಅಂಶ ಹೊರಬೀಳದಿರಲಿ ಎನ್ನುವ ನಿಟ್ಟಿನಲ್ಲಿ ಪ್ರತ್ಯೇಕ ಟ್ಯಾಂಕ್ ವ್ಯವಸ್ಥೆಯೂ ವಾಹನಕ್ಕಿದೆ.
ಒಟ್ಟಿನಲ್ಲಿ ಕಸ ವಿಲೇವಾರಿಗೆ ಹೊಸ ಪ್ರಯತ್ನ ಮಾಡಿರುವ ವಿಶ್ವನಾಥ ಅವರ ಕಾರ್ಯಕ್ಕೆ ಸರಕಾರ ಹಾಗೂ ಸಂಘ ಸಂಸ್ಥೆಗಳು ಕೈ ಜೋಡಿಸುವ ಕೆಲಸ ಮಾಡಬೇಕಾಗಿದೆ.....!
Kshetra Samachara
30/01/2021 05:36 pm