ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಾಮೂಹಿಕ ಪುಣ್ಯತಿಥಿ ಮಾಡಿದ ಕೆಲಗೇರಿ ನಿವಾಸಿಗಳು

ಧಾರವಾಡ: ಮೊನ್ನೆಯಷ್ಟೆ ಧಾರವಾಡದ ಇಟಿಗಟ್ಟಿ ಬೈಪಾಸ್ ನಲ್ಲಿ ಭೀಕರ ಅಪಘಾತ ಸಂಭವಿಸಿ ಸಾವನ್ನಪ್ಪಿದ್ದ ಮಹಿಳೆಯರ ಸಾಮೂಹಿಕ ಪುಣ್ಯತಿಥಿಯನ್ನು ಕೆಲಗೇರಿ ನಿವಾಸಿಗಳು ಮಾಡುವ ಮೂಲಕ ಗಮನಸೆಳೆದರು.

ಅಪಘಾತ ನಡೆದು 9 ದಿನಗಳಾದ ಹಿನ್ನೆಲೆಯಲ್ಲಿ ಕೆಲಗೇರಿ ನಿವಾಸಿಗಳು ಬೈಪಾಸ್ ಪಕ್ಕದಲ್ಲೇ ಪೆಂಡಾಲ್ ಹಾಕಿ ಪುಣ್ಯತಿಥಿ ಮಾಡಿದರು.

ಕೆಲಗೇರಿಯ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು, ಅಪಘಾತದಲ್ಲಿ ಸಾವನ್ನಪ್ಪಿದ ಮಹಿಳೆಯರ ಭಾವಚಿತ್ರವನ್ನು ಬಿಡಿಸಿ ಅವುಗಳನ್ನೇ ಪೂಜೆಗಿಟ್ಟಿದ್ದರು. ಆ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಯಿತು. ನಂತರ ಅಲ್ಲೇ ಊಟದ ವ್ಯವಸ್ಥೆ ಕೂಡ ಮಾಡಲಾಗಿತ್ತು.

ಈ ಬೈಪಾಸ್ ರಸ್ತೆಯನ್ನು ಅಗಲೀಕರಣ ಮಾಡಬೇಕು ಎಂದು ಈಗಾಗಲೇ ಸಾಕಷ್ಟು ಹೋರಾಟ ನಡೆದಿದ್ದು, ಇದೀಗ ಅದೇ ರಸ್ತೆ ಪಕ್ಕವೇ ಕೆಲಗೇರಿ ನಿವಾಸಿಗಳು ಅಪಘಾತದಲ್ಲಿ ಸಾವನ್ನಪ್ಪಿದ ಮಹಿಳೆಯರ ಸಾಮೂಹಿಕ ಪುಣ್ಯ ತಿಥಿ ಮಾಡುವ ಮೂಲಕ ಸರ್ಕಾರದ ಗಮನಸೆಳೆಯುವ ಕೆಲಸ ಮಾಡಿದರು.

Edited By : Manjunath H D
Kshetra Samachara

Kshetra Samachara

23/01/2021 07:31 pm

Cinque Terre

90.36 K

Cinque Terre

23

ಸಂಬಂಧಿತ ಸುದ್ದಿ