ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಗಲಿದ ರಾಮನಿಗೆ ಕಂಬನಿ ಮಿಡಿದ ರೈತ ಕುಟುಂಬ: ಶೋಕಸಾಗರದಲ್ಲಿ ಮುಳುಗಿದ ಗ್ರಾಮ

ಹುಬ್ಬಳ್ಳಿ:ಆತ ವನವಾಸ ಮಾಡಿದ ರಾಮನಲ್ಲ.ನನಗೆ ಬೇಕು ನನಗೆ ಬೇಕು ಎಂದು ಹಂಬಲಿಸುವ ಮನುಷ್ಯ ಜೀವಿಯಂತೂ ಅಲ್ಲವೆ ಅಲ್ಲ.ಆದರೆ ತನ್ನ ಜೀವನವನ್ನೇ ಒಂದು ಕುಟುಂಬಕ್ಕಾಗಿ ಶ್ರಮಿಸಿದ ನಿಸ್ವಾರ್ಥ ಜೀವಿ ರಾಮ.ಈ ರಾಮನ ಅಗಲಿಕೆಗೆ ಕುಟುಂಬ ಮಾತ್ರವಲ್ಲದೆ ಊರಿಗೆ ಊರು ಕಂಬನಿ ಮಿಡಿಯುತ್ತಿದೆ.ಹಾಗಿದ್ದರೇ ಯಾರು ಆ ರಾಮ ಅಲ್ಲಿ ಆಗಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ...

ಸಾಕು ಪ್ರಾಣಿಗಳೊಂದಿಗಿನ ಸಂಬಂಧ ನಿಜಕ್ಕೂ ಅವಿಸ್ಮರಣೀಯ ನೆನಪನ್ನು ಹುಟ್ಟು ಹಾಕುವುದಂತೂ ಖಂಡಿತ. ಅದೇ ರೀತಿಯ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ರೈತ ಕುಟುಂಬವೊಂದು ತಮ್ಮ ಮನೆಯಲ್ಲಿಯೇ ಜನಸಿದ ಎತ್ತಿಗೆ ರಾಮ ಎಂದು ನಾಮಕರಣ ಮಾಡಿ ಪ್ರತಿವರ್ಷ ಹುಟ್ಟು ಹಬ್ಬವನ್ನು ಆಚರಣೆ ಮಾಡುವ ಮೂಲಕ ಮನೆಯ ಸದಸ್ಯರಲ್ಲಿ ಒಬ್ಬನಂತೆ ನೋಡುತ್ತಿದ್ದರು. ಹೌದು..ಅಶೋಕ ಗಾಮನಗಟ್ಟಿ ರೈತ ಕುಟುಂಬದಲ್ಲಿ 12-07-1994ರಂದು ಜನಿಸಿದ ಎತ್ತಿಗೆ ರಾಮ ಎಂದು ನಾಮಕರಣ ಮಾಡಿ ಮನೆಯ ಮಗನಂತೆ ಜೋಪಾನ ಮಾಡಿದ್ದರು.ಆದರೆ ಸುಮಾರು 27 ವರ್ಷಗಳ ಕಾಲ ದುಡಿದ ರಾಮ ಇಂದು ಸಾವನ್ನಪ್ಪಿದ್ದು,ಕುಟುಂಬಸ್ಥರ ಆಕ್ರಂದನ‌ ಮುಗಿಲು ಮುಟ್ಟಿದೆ.

ರಾಮ ಮಾಡಿದ ಸೇವೆಯನ್ನು ಮನೆಯ ಮಂದಿ ಮಾತ್ರವಲ್ಲದೇ ಗ್ರಾಮಕ್ಕೆ ಗ್ರಾಮವೇ ಮೆಲುಕು ಹಾಕುತ್ತಿದೆ.ಇನ್ನೂ ಮೃತಪಟ್ಟಿರುವ ರಾಮನಿಗೆ ವಿಜೃಂಭಣೆಯಿಂದ ಅಂತಿಮ ಸಂಸ್ಕಾರ ಮಾಡಲು ನಿರ್ಧರಿಸಿದ್ದು,ಟ್ರ್ಯಾಕ್ಟರ್ ನಲ್ಲಿ ಪಾರ್ಥಿವ ಶರೀರವನ್ನು ಇಟ್ಟು ಸಕಲ ವಾದ್ಯ ಮೇಳದೊಂದಿಗೆ ಊರಲ್ಲಿ ಮೆರವಣಿಗೆ ಮಾಡಲಾಯಿತು. ಗ್ರಾಮದ ಒಬ್ಬ ಗಣ್ಯವ್ಯಕ್ತಿ ನಿಧನರಾದರೇ ಯಾವ ರೀತಿಯಲ್ಲಿ ಮೆರವಣಿಗೆ ಮಾಡುತ್ತಾರೋ ಅದೇ ರೀತಿಯಲ್ಲಿ ಮೂಕ ಪ್ರಾಣಿ ರಾಮನಿಗೆ ಗೌರವ ಸಲ್ಲಿಸಲಾಯಿತು. ಇನ್ನೂ ಪ್ರತಿವರ್ಷ ಹುಟ್ಟು ಹಬ್ಬದಲ್ಲಿ ಕೇಕ್ ಕತ್ತರಿಸಿ ಆರತಿ ಬೆಳಗಿ ವಿಶೇಷವಾಗಿ ಆಚರಣೆ ಮಾಡಲಾಗುತ್ತಿತ್ತು.ಆದರೆ ‌ಇಂದು ನಿಧನ ಹೊಂದಿದ ರಾಮನಿಗೆ ಗಾಮನಗಟ್ಟಿ ರೈತ ಕುಟುಂಬ ಕಣ್ಣೀರು ಸಮರ್ಪಣೆ ಮಾಡಿದೆ.

ಬಾಯಿ ಇಲ್ಲದ ಪ್ರಾಣಿಯ ಜೊತೆಗೆ ರೈತ ಕುಟುಂಬ ಉತ್ತಮ ಬಾಂಧವ್ಯ ಹೊಂದಿದ್ದು,ದಿನದ 24 ಗಂಟೆಯೂ ಕೂಡ ರಾಮನೊಂದಿಗೆ ಒಡನಾಟ ಹೊಂದಿರುವ ಅಶೋಕ ಗಾಮನಗಟ್ಟಿ ಕುಟುಂಬ ರಾಮನಿಲ್ಲದೇ ಅನಾಥವಾಯಿತೇ.ಒಟ್ಟಿನಲ್ಲಿ ನಿಸ್ವಾರ್ಥ ಸೇವೆಗೆ ಹೆಸರಾಗಿದ್ದ ರಾಮನ ಆತ್ಮಕ್ಕೆ ಶಾಂತಿ ಸಿಗಲಿ ಮತ್ತೇ ಹುಟ್ಟಿ ಬಾ ರಾಮ ಎಂಬುವಂತ ಮಾತು ರೈತರ ಬಾಯಲಿ ಕೇಳಿ ಬಂದಿರುವುದು ನಿಜಕ್ಕೂ ವಿಶೇಷವಾಗಿದೆ.

Edited By : Nagesh Gaonkar
Kshetra Samachara

Kshetra Samachara

20/01/2021 05:55 pm

Cinque Terre

104.16 K

Cinque Terre

26

ಸಂಬಂಧಿತ ಸುದ್ದಿ