ಧಾರವಾಡ: ಅಮೆರಿಕದ ಚಿಕಾಗೋದಲ್ಲಿ ನಡೆದಿದ್ದ ಸರ್ವಧರ್ಮ ಸಮ್ಮೇಳನದ ಮೂಲಕ ಇಡೀ ವಿಶ್ವ ತನ್ನತ್ತ ನೋಡುವಂತೆ ಮಾಡಿದ್ದ ಹಾಗೂ ಇಡೀ ವಿಶ್ವ ಕಂಡ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ದೇಶದಾದ್ಯಂತ ಆಚರಣೆ ಮಾಡಲಾಗುತ್ತಿದೆ. ಧಾರವಾಡದಲ್ಲಿ ಡಿಫರಂಟ್ ಆಗಿ ವಿವೇಕಾನಂದರ ಜನ್ಮ ದಿನವನ್ನು ಆಚರಣೆ ಮಾಡಲಾಗಿದೆ.
ಹೀಗೆ ಮರಳನ್ನು ಗುಡ್ಡೆ ಹಾಕುತ್ತಿರುವ ಕಲಾವಿದನ ಹೆಸರು ಮಂಜುನಾಥ ಹಿರೇಮಠ. ಧಾರವಾಡದ ಕೆಲಗೇರಿಯ ಪರಿಸರ ಸ್ನೇಹಿ ಕಲಾವಿದ. ಏನಾದರೊಂದು ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸದಾ ಸುದ್ದಿಯಲ್ಲಿರುತ್ತಾರೆ.
ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ಧಾರವಾಡದ ದೊಡ್ಡನಾಯಕನಕೊಪ್ಪದ ಹತ್ತಿರ ಮರಳಿನಲ್ಲಿ ಸ್ವಾಮಿ ವಿವೇಕಾನಂದರ ಕಲಾಕೃತಿ ರಚಿಸಿ ಎಲ್ಲರ ಗಮನಸೆಳೆಯುವುದಷ್ಟೇ ಅಲ್ಲದೇ ಆ ಮೂಲಕ ಅರ್ಥಪೂರ್ಣವಾಗಿ ವಿವೇಕಾನಂದ ಜಯಂತಿಯನ್ನು ಆಚರಿಸಿದ್ದಾರೆ.
ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಹಾಗೂ ಅವರ ಸ್ನೇಹಿತರ ಬಳಗದ ವತಿಯಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಲಾವಿದ ಸೃಷ್ಟಿಯಿಂದ ಈ ವೀರ ಸನ್ಯಾಸಿ ಕಲಾಕೃತಿಗೆ ನಗರದ ವಿವಿಧ ಭಾಗದ ಜನ ಬಂದು ಪೂಜೆ ಸಲ್ಲಿಸಿದರು.
Kshetra Samachara
17/01/2021 02:20 pm