ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮೂರುಸಾವಿರ ಮಠದ ಆಸ್ತಿಯನ್ನು ಸ್ವಇಚ್ಛೆಯಿಂದ ಬಿಟ್ಟು ಕೊಡಿ

ಧಾರವಾಡ: ಹುಬ್ಬಳ್ಳಿಯ ಮೂರುಸಾವಿರ ಮಠದ ಆಸ್ತಿಯನ್ನು ಕೆಲವರಿಗೆ ದಾನವಾಗಿ ಹಾಗೂ ಇನ್ನು ಕೆಲವರಿಗೆ ಅಗ್ರಿಮೆಂಟ್ ಮೂಲಕ ಕೊಡಲಾಗಿದೆ. ಯಾರು ಈ ಮಠದ ಆಸ್ತಿಯನ್ನು ತೆಗೆದುಕೊಂಡಿದ್ದಾರೋ ಅವರು ಸ್ವಇಚ್ಛೆಯಿಂದ ಮಠಕ್ಕೆ ಬಿಟ್ಟು ಕೊಡುವ ಮೂಲಕ ದೊಡ್ಡ ಗುಣ ತೋರಿಸಬೇಕು ಎಂದು ಬಾಲೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಠದ ಆಸ್ತಿ ಉಳಿಯಬೇಕು ಎಂದು ನಾವು ಜನಜಾಗೃತಿ ಮಾಡುತ್ತಿದ್ದೇವೆ. ಮಠದ ಆಸ್ತಿ ವಾಪಸ್ ಬರುವವರೆಗೂ ನಾವು ಹೋರಾಟ ಮಾಡುತ್ತೇವೆ ಎಂದರು.

ಯಾವಾಗ ಮಠದಿಂದ ಭಕ್ತರು ಹೊರ ಹೋಗಿ ರಾಜಕಾರಣಿಗಳು ಮಠದ ಒಳಗೆ ಪ್ರವೇಶ ಮಾಡುತ್ತಾರೋ ಅಲ್ಲಿ ಅಶಾಂತಿ ನೆಲೆಸುತ್ತದೆ. ರಾಜಕಾರಣಿಗಳು ಇರುವ ಸ್ಥಳ ವಿಧಾನಸೌಧವೇ ಹೊರತು ಮಠಗಳಲ್ಲ. ಸಾಕಷ್ಟು ಮಠಗಳಲ್ಲಿ ರಾಜಕಾರಣಿಗಳು ಪ್ರವೇಶಿಸಿ ಮಠದ ಆಸ್ತಿ ಕಬಳಿಸುವ ಹಾಗೂ ಮಠದ ಆಸ್ತಿ ನಾಶ ಮಾಡುವ ಪ್ರಯತ್ನ ನಡೆದಿದೆ. ಇದು ಯಾವ ಕಾರಣಕ್ಕೂ ಒಳ್ಳೆಯದಲ್ಲ ಎಂದರು.

Edited By : Nagesh Gaonkar
Kshetra Samachara

Kshetra Samachara

12/01/2021 07:37 pm

Cinque Terre

82.93 K

Cinque Terre

16

ಸಂಬಂಧಿತ ಸುದ್ದಿ