ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ಗತಕಾಲ ಸೇರುತ್ತಿರುವ ಶತಮಾನದ ಅಕ್ಕಿ ಮಿಲ್ ಗಳು

ಪಬ್ಲಿಕ್ ನೆಕ್ಸ್ಟ್ ವಿಶೇಷ: ಮಲ್ಲಿಕಾರ್ಜುನ ಪುರದನಗೌಡರ

ಕಲಘಟಗಿ:ಭತ್ತದ ಕಣಜ ಖ್ಯಾತಿಯ ಕಲಘಟಗಿಯಲ್ಲಿನ ನೂರು ವರ್ಷಗಳ ಹಳೆಯ ಅಕ್ಕಿ (ರೈಸ್)

ಮಿಲ್ ಗಳು ಭತ್ತದ ಬೆಳೆ ಕಡಿಮೆಯಾದ ಪರಿಣಾಮ ನಷ್ಟದಲ್ಲಿ ಇದ್ದು,ನೈಪಥ್ಯಕ್ಕೆ ಸರಿಯುತ್ತಿವೆ.

ಹಲವು ವರ್ಷಗಳ ಹಿಂದೆ ಕಲಘಟಗಿ ಭತ್ತದ ಬೆಳೆಗೆ ಹಾಗೂ ಅಕ್ಕಿಯ ರುಚಿಗೆ ಅತ್ಯಂತ ಪ್ರಸಿದ್ಧವಾಗಿತ್ತು,ಆದರೆ ಇತ್ತಿತ್ತಲಾಗಿ ರೈತರು ವಾಣಿಜ್ಯ ಬೆಳೆಗಳಾದ ಸೋಯಾ,ಕಬ್ಬು,ಗೋವಿನ ಜೋಳ ‌ಬೆಳೆಯಲಾರಂಬಿಸಿದ್ದು,ಕಲಘಟಗಿಯ ಅಕ್ಕಿ‌ಮಿಲ್ ಗಳಿಗೆ ರೈತರು ಭತ್ತವನ್ನು ತರುತ್ತಿಲ್ಲ ಇದರಿಂದ ಅಕ್ಕಿ ಮಿಲ್ ಗಳಿಗೆ ಹೊಡೆತ ಬಿದ್ದಿದ್ದು,ನಷ್ಟದಲ್ಲಿ ನಡೆಯುತ್ತಿವೆ.

ಕಲಘಟಗಿ ತಾಲೂಕಿನಲ್ಲಿ ಅಂದು ಹಕ್ಕಲಸಾಳಿ,ದೂಡ್ಡಗ್ಯಾ,ಅಂಬೆಮೋರೆ,ಅಂತರಸಾಳಿಯಂತಹ ವಿಶಿಷ್ಟ ಬಗೆಯ ಭತ್ತದ ಬೆಳೆಗಳನ್ನು ಬೆಳೆಯುತ್ತಿದ್ದ ರೈತರು, ಭತ್ತವನ್ನು‌ ಮಿಲ್ ಗೆ ತಂದು ಹಾಕಿಸಿ ಮನೆಗೆ ಅದೇ ಅಕ್ಕಿಯನ್ನು ರೈತರು‌ ಉಪಯೋಗಿಸುತ್ತಿದ್ದರು‌.ಇತ್ತಿತ್ತಲಾಗಿ ಭತ್ತದ ಬೆಳೆ ಕಡಿಮೆಯಾಗಿದ್ದು,ಮಿಲ್ ಗಳಿಗೆ ಭತ್ತ ಬರುತ್ತಿಲ್ಲ.ಕಲಘಟಗಿಯ ಬೆರಳೆಣಿಕೆಯ ಮಿಲ್ ಗಳಿಂದು ನಷ್ಟದಲ್ಲಿ ಬಳಲುತ್ತಿವೆ.

ಕಲಘಟಗಿಯ ಹಳೆಯ ಮಿಲ್ ಗಳಲ್ಲಿ ಪಾಲಿಶ್ ಮಾಡದೇ ತೆಗೆದ ಅಕ್ಕಿಯಲ್ಲಿ ಹೆಚ್ಚಿನ ಪೋಷಕಾಂಶ ಇರುತ್ತಿತ್ತು,ಆದರೆ ಹೊಸ ತಂತ್ರಜ್ಞಾನ ಬಂದು ಹಳೆ ಮಿಲ್ ಗಳು ಕಣ್ಮರೆಯಾಗುವ ಹಂತ ತಲುಪಿದ್ದು ಹಲವು ಬಗೆಯ ಪಾಲಿಶ್ ಅಕ್ಕಿ ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟಿವೆ.

ಪಡಿತರ ಅಕ್ಕಿಯನ್ನು ಜನರು ಉಪಯೋಗಿಸುತ್ತಿರುವುದರಿಂದ ಹಾಗೂ ರೈತರು ವಾಣಿಜ್ಯ ಬೆಳೆ ಬೆಳೆಯುತ್ತಿರುವುದರಿಂದ ಕಲಘಟಗಿಯ ಅಕ್ಕಿ ಮಿಲ್ ಗಳಿಗೆ ಬಾರಿ ಹೂಡೆತ ನೀಡಿದೆ ಎಂದು ಅಕ್ಕಿಮಿಲ್ ಮಾಲಿಕರಾದ ಡಿ ಎ ಕಡಬಿ ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದರು.

ಕಲಘಟಗಿ‌ ಅಕ್ಕಿ‌ಮಿಲ್ ಗಳಿಗೆ ಭತ್ತದ ಹರಿವು ಇಲ್ಲದೇ,ದೇಸಿ ಅಕ್ಕಿಯ ಘಮ‌ ಕಡಿಮೆಯಾಗಿ ಹಳೆಯ‌ ಮಿಲ್ ಗಳು ಕಣ್ಮರೆಯಾಗುವ ಹಂತ ತಲುಪಿರುವುದು ವಿಪರ್ಯಾಸವೇ ಸರಿ.

Edited By : Nagesh Gaonkar
Kshetra Samachara

Kshetra Samachara

11/01/2021 04:00 pm

Cinque Terre

39.69 K

Cinque Terre

5

ಸಂಬಂಧಿತ ಸುದ್ದಿ