ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ- ಆರ್ಥಿಕ ಸಂಕಷ್ಟ ಎದುರಿಸುತ್ತಿರು ಕೈಮಗ್ಗ ನೇಕಾರ ಸಮುದಾಯ! ತಿರುಗಿ ನೋಡುತ್ತಿಲ್ಲ ಸರ್ಕಾರ

ಹುಬ್ಬಳ್ಳಿ- ರಾಜ್ಯದಲ್ಲಿಗ ಜಾತಿಗೊಂದು ನಿಗಮ ಬೇಕು ಎನ್ನುವ ಕೂಗು ಜೋರಾಗಿದ್ದು, ರಾಜ್ಯ ಸರಕಾರವೂ ಸಹ ಹೊಸ ಹೊಸ ನಿಗಮಗಳ ಸ್ಥಾಪನೆಗೆ ಮುಂದಾಗಿದೆ. ಆದರೆ, ಈಗಿರುವ ನಿಗಮಗಳು ಅಭಿವೃದ್ಧಿಯ ಆಗದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರದ ನೆರವು ಸಿಗದೇ ಇರುವ ಆಸ್ತಿಯನ್ನು ಮಾರಾಟ ಮಾಡಿ ಸಾಲ ತುಂಬುವ ಪರಿಸ್ಥಿತಿ ಬಂದಿವೆ.

ಇದೆಲ್ಲವನ್ನು ಕಂಡು ಕಾಣದಂತಿರುವ ಸರ್ಕಾರ ಹೊಸ ಹೊಸ ನಿಗಮ ರಚನೆಗೆ ಮುಂದಾಗುತ್ತಿರೋದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಆರ್ಥಿಕ ಆರಂಭವಾಗಿ ಹಲವು ದಶಕಗಳೇ ಕಳೆದಿದೆ. ಇದಿಗ ನಿಗಮ ಮಂಡಳಿ 110 ಕೋಟಿ ನಷ್ಟದಲ್ಲಿದ್ದು, ಸಾಲದ ಬಡ್ಡಿಯನ್ನು ಕಟ್ಟಲು ಹಣವಿಲ್ಲದೇ ಪರದಾಟ ನಡೆಸಿದೆ.

ಈ ಆರ್ಥಿಕ ಸಂಕಷ್ಟದಿಂದ ಪಾರಾಗಲು ನಿಗಮ ಆಡಳಿತ ಮಂಡಳಿ ತನ್ನ ಆಸ್ತಿಗಳನ್ನು ಒಂದೊಂದಾಗಿ ಮಾರಾಟಕ್ಕೆ ಮುಂದಾಗಿದೆ. ಬೆಂಗಳೂರಿನ ಹಲಸೂರು ಮತ್ತು ಪೀಣ್ಯದಲ್ಲಿರುವ ನೇಕಾರರ ನಿಗಮದ ನಾಲ್ಕು ಎಕರೆ ಆಸ್ತಿಯಿದೆ.

ಅದರಲ್ಲೂ ಹಲಸೂರಿನಲ್ಲಿರುವ 16 ಗುಂಟೆ ಜಮೀನನ್ನು 16 ಕೋಟಿಗೆ ಮಾರಾಟ ಮಾಡಲಾಗಿದೆ. ಮಾರಟದಿಂದ ಬಂದ ಹಣವನ್ನು ಸಾಲದ ಬಡ್ಡಿಗೆ ಕಟ್ಟಲಾಗುತ್ತಿದ್ದು, ನೇಕಾರರ ಅಭಿವೃದ್ಧಿಗೆ ಬೇಕಾದ ಆರ್ಥಿಕ ನೆರವಿಗೆ ಸರ್ಕಾರ ಎರಡು ವರ್ಷದಿಂದ ಕೊಕ್ಕೆ ಹಾಕಿದ್ದು, ನೇಕಾರರ ಆಕ್ರೋಶಕ್ಕೆ ಕಾರಣವಾಗಿದೆ.

1970 ರ ದಶಕದಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಆರಂಭವಾದಾಗ, ರಾಜ್ಯದಲ್ಲಿ 46 ಸಾವಿರ ಕೈಮಗ್ಗಗಳಿದ್ದವು. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಇದೀಗ ಕೇವಲ 5600 ಕೈಮಗ್ಗಗಳು ಉಳಿದಿವೆ. ನೇಕಾರರ ಅಭಿವೃದ್ದಿಗಾಗಿ ರಚನೆ ಮಾಡಲಾದ ನಿಗಮ ಇದೀಗ ಸಾಲದ ಸುಳಿಯಲ್ಲಿ ಸಿಲುಕಿದ್ದು, ಹಿಂದೆ ಇದ್ದ ನಿರ್ದೇಶಕರು ಮಾಡಿದ ತಪ್ಪಿನಿಂದಾಗಿ ಇಂದು ಆಸ್ತಿಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ.

1991 ರಲ್ಲಿ ಕೇಂದ್ರ ಸರ್ಕಾರದ 20 ಕೋಟಿ, ರಾಜ್ಯ ಸರ್ಕಾರದ 20 ಕೋಟಿ ರೂಪಾಯಿ ಹಣವನ್ನು ಬ್ಯಾಂಕ್ ನಲ್ಲಿ ಡಿಪಾಸಿಟ್ ಮಾಡಲಾಗಿತ್ತು. ಆದರೆ, ಹಿಂದಿ‌ನ ನಿರ್ದೇಶಕರು ಅದರ ಮೇಲೆ ಹೆಚ್ಚಿನ ಸಾಲ ಪಡೆದು ಆರ್ಥಿಕ ಸಂಕಷ್ಟವನ್ನು ಹೇರಿದ್ದಾರೆ.

ಸದ್ಯ 110 ಕೋಟಿ ಆರ್ಥಿಕ ಸಂಕಷ್ಟದಲ್ಲಿರುವ ನಿಗಮ ಪ್ರತಿವರ್ಷ 9 ಕೋಟಿ ಬಡ್ಡಿಯನ್ನು ಕಟ್ಟುತ್ತ ಬರುತ್ತಿದೆ. ಅದರಲ್ಲೂ ಪ್ರತಿವರ್ಷ ಸರ್ಕಾರದಿಂದ ಬರುತ್ತಿದ್ದ 30 ಕೋಟಿ ಅನುದಾನವೂ ನಿಗಮಕ್ಕೆ‌ ಬರುತ್ತಿಲ್ಲ.

ಹೀಗಾಗಿ ಕೈ ಮಗ್ಗಗಳನ್ನೆ ನಂಬಿಕೊಂಡಿರುವ ನೇಕಾರರಿಗೆ ಸಂಕಷ್ಟ ಎದುರಾಗಿದೆ. ಪ್ರತಿನಿತ್ಯ ದುಡಿದರೆ 120 ರಿಂದ 150 ರೂಪಾಯಿ ಕೂಲಿ ನೀಡಲಾಗುತ್ತಿದೆ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿ ಬೇರೆ ಬೇರೆ ವೃತ್ತಿಯ ಕಡೆಗೆ ನೇಕಾರರು ಮುಖ ಮಾಡುತ್ತಿದ್ದಾರೆ.

ಇತ್ತ ನಿಗಮದ ನಾಲ್ಕು ಎಕರೆ ಆಸ್ತಿಯೇ 500 ಕೋಟಿಗೆ ಬೆಲೆ ಬಾಳುತ್ತದೆ. ಈಗಾಗಲೇ ಅದರಲ್ಲಿನ 16 ಗುಂಟೆ ಜಮೀನನ್ನು ಕೇವಲ 16 ಕೋಟಿಗೆ ಮಾರಾಟ ಮಾಡಿದ್ದು ಕೂಡ ರಾಜ್ಯ ನೇಕಾರರ ಸಂಘದ ಅನುಮಾನ ಮೂಡಿಸಿದೆ.

ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿಯನ್ನು ಬೇಕಾಬಿಟ್ಟಿಯಾಗಿ ಮಾರಾಟ ಮಾಡುತ್ತಿರೋದು ಒಂದು ಕಡೆಯಾದ್ರೆ, ಆರ್ಥಿಕ ಸಂಕಷ್ಟದಿಂದ ನೇಕಾರರ ಬದುಕು ಬೀದಿಗೆ ಬಿದ್ದಿದೆ. ನಿಗಮದ ಅಭಿವೃದ್ದಿಗೆ ಶ್ರಮಸಬೇಕಾದ ನಿರ್ಲಕ್ಷ್ಯ ತೋರುತ್ತಲೇ ಬಂದಿದ್ದು, ಇನ್ನಾದರೂ ಇತ್ತ ಗಮನಹರಿಸಬೇಕೆಂದು ನೇಕಾರರು ಒತ್ತಾಯಿಸಿದ್ದಾರೆ......!

Edited By : Manjunath H D
Kshetra Samachara

Kshetra Samachara

29/12/2020 09:08 pm

Cinque Terre

70.09 K

Cinque Terre

0

ಸಂಬಂಧಿತ ಸುದ್ದಿ