ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮುಸ್ಲಿಂ ವ್ಯಾಪಾರಿಯ ಸದ್ಗುರು ಸಿದ್ಧಾರೂಢರ ಭಕ್ತಿ ನೋಡಿ.!

ಹುಬ್ಬಳ್ಳಿ: ರಾಜ್ಯದಲ್ಲಿ ಹಿಂದೂ ಮುಸ್ಲಿಂ ಸಮುದಾಯದ ನಡುವೆ ಹಿಜಾಬ್ ಹಾಗೂ ಕೇಸರಿ ಶಾಲು ಗದ್ದಲ ಒಂದಿಲ್ಲೊಂದು ರೀತಿಯಲ್ಲಿ ತೀವ್ರತೆಯನ್ನು ಪಡೆದುಕೊಳ್ಳುವ ಮೂಲಕ ಕೋಮುವಾದ ಸೃಷ್ಟಿಸಿದ್ದವು. ಆದರೆ ಇದೆಲ್ಲದಕ್ಕೂ ವಿರುದ್ಧ ಎಂಬಂತೇ ಇಲ್ಲೋರ್ವ ಮುಸ್ಲಿಂ ಸಮುದಾಯದ ವ್ಯಾಪಾರಿ ತನ್ನ ಸರ್ವಧರ್ಮ ಸಮನ್ವಯತೆ ಮೆರೆದಿದ್ದಾರೆ.

ಹೌದು. ಜಾತಿ ಭೇದವಿಲ್ಲದೆ ಈ ಮುಸ್ಲಿಂ ವ್ಯಾಪಾರಿಯು ಶಿವರಾತ್ರಿ ಹಬ್ಬದ ಅಂಗವಾಗಿ ಕಲ್ಲಂಗಡಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದು, ಹಣ್ಣಿನಲ್ಲಿಯೇ ಸಿದ್ಧಾರೂಢರ ಹಾಗೂ ಶಿವನ ಚಿತ್ರವನ್ನು ಬಿಡಿಸಿ ವಿಶೇಷವಾಗಿ ಗೌರವ ಸಲ್ಲಿಸಿದ್ದಾರೆ. ಬಾಬಾ ಕರ್ಜಗಿ ಎಂಬುವ ವ್ಯಾಪಾರಿ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಬಳಿಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವುದು ಕಂಡುಬಂದಿದೆ.

ಜಾತಿ ಜಾತಿ ಎಂದು ಹೊಡೆದಾಡಿಕೊಳ್ಳುವವರ ನಡುವೆ ಇವರು ಸರ್ವಧರ್ಮವನ್ನು ಪ್ರೀತಿಸುವ ಈ ವ್ಯಾಪಾರಿಗೆ ಎಲ್ಲೆಡೆಯೂ ಸಾರ್ವಜನಿಕ ಪ್ರಶಂಸೆ ವ್ಯಕ್ತವಾಗಿದೆ.

Edited By : Vijay Kumar
Kshetra Samachara

Kshetra Samachara

28/02/2022 05:13 pm

Cinque Terre

15.04 K

Cinque Terre

10

ಸಂಬಂಧಿತ ಸುದ್ದಿ