ಹುಬ್ಬಳ್ಳಿ: ಸಾಮಾಜಿಕ ಬದುಕಿಗೆ ದೂರವಾಗಿ ತಮ್ಮದೇಯಾದ ಒಂಟಿತನದ ಪ್ರಪಂಚದಲ್ಲಿರುವ ಮಂಗಳಮುಖಿಯರೊಡನೆ ಇಲ್ಲೊಂದು ಬಳಗ ದೀಪಾವಳಿ ಆಚರಿಸಿದೆ.
ಹುಬ್ಬಳ್ಳಿಯ ಸಮಾಜ ಸೇವಕ ಮಂಜುನಾಥ ಹೆಬಸೂರ ಗೆಳೆಯರ ಬಳಗ ವಿನೂತನವಾಗಿ ಹಬ್ಬ ಆಚರಿಸಿದೆ. ಹುಬ್ಬಳ್ಳಿಯ ಇಂದಿರಾಗಾಂಧಿ ಬಡಾವಣೆಯಲ್ಲಿ ವಾಸಿಸುತ್ತಿರುವ ಮಂಗಳಮುಖಿಯರನ್ನು ತಮ್ಮ ನವನಗರದ ಮನೆಗೆ ಕರೆಸಿಕೊಂಡು ದೀಪಾವಳಿ ಆಚರಿಸಿದ್ದಾರೆ.. ಅರಿಶಿನ, ಕುಂಕುಮ, ಬಳೆ ಹಾಗೂ ಸೀರೆ ಕೊಟ್ಟು ಉಡಿ ತುಂಬಿದ್ದಾರೆ. ಜೊತೆಗೆ ದೀಪ ಹಚ್ಚಿ ಸಂಭ್ರಮಿಸಿದ್ದಾರೆ.
ಲಾಕ್ ಡೌನ ಸಮಯದಲ್ಲೂ ಮಂಜುನಾಥ ಹೆಬಸೂರ ಗೆಳೆಯರ ಬಳಗ ಇವರಿಗೆ ಸಹಾಯ ಮಾಡಿದ್ದರು. ಈಗಲೂ ಕೂಡ ಮಂಗಳಮುಖಿಯರನ್ನು ಮನೆಗೆ ಕರೆಸಿಕೊಂಡು ಅವರೊಂದಿಗೆ ಹಬ್ಬ ಆಚರಿಸುವ ಮೂಲಕ ಮಂಗಳ ಮುಖಿಯರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ.
Kshetra Samachara
17/11/2020 12:39 pm