ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ದೇವಸ್ಥಾನದಲ್ಲಿ ಮಕ್ಕಳ ಜೊತೆ ಮಗುವಾದ ಶಿಕ್ಷಕ ವಿದ್ಯಾಗಮ ಕ್ಲಾಸ್ ಸಖತ್ ಡ್ಯಾನ್ಸ್

ಕುಂದಗೋಳ : ಸರ್ಕಾರಿ ಶಾಲೆ ಎಂದರೇ ಮೂಗು ಮುರಿದು ಇಂಗ್ಲಿಷ್ ಜೀವನಕ್ಕೆ ಗಂಟು ಬಿದ್ದು ತಮ್ಮ ಮಕ್ಕಳನ್ನ ಕಾನ್ವೆಂಟ್ ಗೆ ಸೇರಿರುವವರೇ ಅಪಾರವಾಗಿರುವ ಕಾಲದಲ್ಲಿ ಇಲ್ಲೊಬ್ಬ ಶಿಕ್ಷಕರು ಪಾಠ ಕಲಿಸುವ ಗತ್ತು ಮಕ್ಕಳನ್ನ ಸರ್ಕಾರಿ ಶಾಲೆಗೆ ಕೈ ಕರೆಯುತ್ತಿದೆ.

ಅಂತಹ ಪಾಠ ಗತ್ತು ಏನಪ್ಪಾ ಅಂದ್ರಾ ? ಕೊರೊನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಶಾಲೆಗಳು ಬಾಗಿಲು ಹಾಕಿದ್ದೆ ತಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಆನ್ಲೈನ್ ಶಿಕ್ಷಣದ ಜೊತೆ ವಿದ್ಯಾಗಮ ಯೋಜನೆ ಜಾರಿಯಾಗಿದ್ದು ಗೊತ್ತಿರುವ ವಿಷಯ ಹೀಗೆ ವಿದ್ಯಾಗಮ ಯೋಜನೆ ಅನುಸಾರ ತಮ್ಮ ಶಾಲೆಯ ಮಕ್ಕಳಿಗೆ ದೇವಸ್ಥಾನ ಆವರಣದಲ್ಲಿ ನೃತ್ಯ ಮಾಡುತ್ತಾ ಪಾಠ ಬೋಧಿಸಿ ಮಕ್ಕಳನ್ನೇಷ್ಟಾ ಅಲ್ಲಾ ಗ್ರಾಮಸ್ಥರ ಮನವನ್ನ ಈ ಶಿಕ್ಷಕರು ಗೆದ್ದಿದ್ದಾರೆ.

ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದ ಜಿ.ಪಿ.ಮಾಂಡ್ರೆ ಎಂಬ ಶಿಕ್ಷಕರು ತಮ್ಮ ವಯಸ್ಸಿನ ಅಂತರವನ್ನೇ ಮರೆತು ಮಕ್ಕಳ ಜೊತೆ ತಾವು ಮಕ್ಕಳಾಗಿ ನೃತ್ಯ ಮಾಡುತ್ತಾ ಪಾಠ ಮಾಡಿದ್ದನ್ನು ಸ್ಥಳೀಯರೇ ವಿಡಿಯೋ ಸೆರೆ ಹಿಡಿದು ಪಬ್ಲಿಕ್ ನೆಕ್ಸ್ಟ್ ನೀಡಿ ಶಿಕ್ಷಕರ ಕಾರ್ಯಕ್ಕೆ ಸಲಾಂ ಹೊಡೆದಿದ್ದಾರೆ.

Edited By :
Kshetra Samachara

Kshetra Samachara

22/09/2020 10:42 am

Cinque Terre

23.27 K

Cinque Terre

1

ಸಂಬಂಧಿತ ಸುದ್ದಿ