ಕಲಘಟಗಿ: ತಾಲೂಕಿನ ಜಿ.ಬಸನಕೊಪ್ಪದಲ್ಲಿ ಬಿಜೆಪಿ ಕಾರ್ಯಕರ್ತರು ಅಗಲಿದ ನಾಯಕ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಯುವ ಮುಖಂಡ ವಜ್ರಕುಮಾರ ಮಾತನಾಡಿ, ಸಚಿವ ಸುರೇಶ ಅಂಗಡಿ ಅವರ ಅಕಾಲಿಕ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದರು.
ಈ ಸಂದರ್ಭದಲ್ಲಿ ವಜ್ರಕುಮಾರ ಮಾಧನಭಾವಿ,ಅಜ್ಜಪ್ಪ ಸುಳ್ಳದ,ಸಂತೋಷ ಮಾಧನಭಾವಿ,ಸಂತೋಷ ಬಡೀಗೆರ,ಶಿದ್ದಲಿಂಗ ಮಾಧನಭಾವಿ ಇದ್ದರು.
Kshetra Samachara
24/09/2020 09:18 pm