ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನ್ ಲೈನ್ ಮಾರುಕಟ್ಟೆಯಲ್ಲಿ ಹುಬ್ಬಳ್ಳಿ ಅವಲಕ್ಕಿ ಹವಾ....

ಹುಬ್ಬಳ್ಳಿ: ಆನ್‌ಲೈನ್‌ ವಹಿವಾಟಿನ ಅತ್ಯಂತ ಜನಪ್ರಿಯ ಕಂಪೆನಿ ಅಮೆಜಾನ್‌ ನಲ್ಲಿ “ಹುಬ್ಬಳ್ಳಿ ಅವಲಕ್ಕಿ’ ಹವಾ ಮಾಡತೊಡಗಿದೆ. ಭಾರತದ ವಿವಿಧ ರಾಜ್ಯಗಳಿಗೆ ಹುಬ್ಬಳ್ಳಿ ಅವಲಕ್ಕಿ ಮುಟ್ಟಿಸುತ್ತಿದೆ. ಅಮೇಜಾನ್‌ನಲ್ಲಿ ಅವಲಕ್ಕಿ ಎಂದು ಟೈಪ್ ಮಾಡಿದ್ದರೆ “ಹುಬ್ಬಳ್ಳಿ ಅವಲಕ್ಕಿ’ಯೇ ಫಸ್ಟ್‌ ಕಾಣುವಷ್ಟರ ಮಟ್ಟಿಗೆ ಜನಮನ್ನಣೆ ಪಡೆದಿದೆ.

ಬೇರೆ ರಾಜ್ಯಗಳ ಅವಲಕ್ಕಿ ಅಬ್ಬರದ ನಡುವೆಯೂ ಜಾಗತಿಕ ಮಟ್ಟದ ಆನ್‌ಲೈನ್‌ ನಲ್ಲಿ ಹುಬ್ಬಳ್ಳಿ ಅವಲಕ್ಕಿ ಹೆಚ್ಚಿನ ಸ್ಥಾನ ಪಡೆದುಕೊಂಡಿದೆ. ಕಳೆದ ಐವತ್ತು ವರ್ಷಗಳಿಂದ ಅವಲಕ್ಕಿ ತಯಾರಿಕೆಯನ್ನೇ ಪ್ರಮುಖ ವೃತ್ತಿಯಾಗಿಸಿಕೊಂಡಿರುವ ವಿ.ಪಿ. ಮೂರಶಿಳ್ಳಿ ಆ್ಯಂಡ್‌ ಕಂಪೆನಿ ಹೇಳಿಕೊಳ್ಳುವುದಕ್ಕೆ ದೊಡ್ಡ ಫ್ಯಾಕ್ಟರಿ ಏನು ಅಲ್ಲ. ಆದರೆ, ಗುಣಮಟ್ಟದ ಅವಲಕ್ಕಿ ತಯಾರಿಕೆ ಮೂಲಕ ದೇಶದಾದ್ಯಂತ ತನ್ನ ರುಚಿಯ ಅಚ್ಚೊತ್ತತೊಡಗಿದೆ.

Edited By :
Kshetra Samachara

Kshetra Samachara

20/09/2020 08:33 am

Cinque Terre

91.44 K

Cinque Terre

16

ಸಂಬಂಧಿತ ಸುದ್ದಿ