ಹುಬ್ಬಳ್ಳಿ: ಎತ್ತಣ ಮಾಮರ... ಎತ್ತಣ ಕೋಗಿಲೆ...ಎತ್ತಣದಿಂದೆತ್ತ ಸಂಬಂಧವಯ್ಯ ಎಂಬುವಂತೆ ಕೇಂದ್ರ ಸಚಿವ ಸುರೇಶ ಅಂಗಡಿಯವರ ಬಾಂಧವ್ಯ ಬೆಳಗಾವಿಯಿಂದ ಹುಬ್ಬಳ್ಳಿವರೆಗೂ ಬೇಸೆದುಕೊಂಡಿದೆ.
ನಂಟು ಬೆಳೆಸಿಕೊಂಡು ಹುಬ್ಬಳ್ಳಿಗೆ ನೆಂಟರಾದ ಸುರೇಶ ಅಂಗಡಿ ಇನ್ನೂ ನೆನಪು ಮಾತ್ರ..
ಸದ್ಗುರು ಸಿದ್ಧಾರೂಢರ ಪರಮಭಕ್ತರಾಗಿದ್ದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಇತ್ತೀಚೆಗಷ್ಟೇ ಹುಬ್ಬಳ್ಳಿಯ ರೈಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹೆಸರಿಡುವ ಮೂಲಕ ಭಕ್ತಿ ಸಮರ್ಪಿಸಿದ್ದರು.
ಅಲ್ಲದೇ ಬಹುದಿನ ಬೇಡಿಕೆಯನ್ನು ಈಡೇರಿಸುವ ಮೂಲಕ ಹುಬ್ಬಳ್ಳಿ ಜನಮನ್ನಣೆ ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಹುಬ್ಬಳ್ಳಿಗೆ ಹಲವಾರು ಬಾರಿ ಭೇಟಿ ನೀಡಿದಾಗಲೂ ಸದ್ಗುರು ಸಿದ್ಧಾರೂಢ ಮಠಕ್ಕೂ ಭೇಟಿ ನೀಡಿ ದರ್ಶನ ಪಡೆಯುತ್ತಿದ್ದ ಸುರೇಶ ಅಂಗಡಿಯವರು ಹುಬ್ಬಳ್ಳಿಯೊಂದಿಗೆ ಅಪಾರ ನಂಟನ್ನು ಹೊಂದಿದ್ದರು.
ಸುರೇಶ ಅಂಗಡಿ ಅವರು ತಮ್ಮ ರಾಜಕೀಯ ಹಾಗೂ ಕೌಟುಂಬಿಕ ಜೀವನದ ಪ್ರತಿಯೊಂದು ಬೆಳವಣಿಗೆಯಲ್ಲಿಯೂ ಕೂಡ ಸಿದ್ದಾರೂಡರನ್ನು ಸ್ಮರಿಸುತ್ತಿದ್ದರು.
ನಾಮಪತ್ರ ಸಲ್ಲಿಕೆಯ ಮುನ್ನ ಸಿದ್ದಾರೂಡರ ಪ್ರಸಾದ ಪಡೆದುಕೊಂಡು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದರು ಎಂಬುವುದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.
ರೈಲ್ವೇ ಮ್ಯೂಸಿಯಂ, ಎರಡನೇ ಪ್ರವೇಶ ದ್ವಾರ ಉದ್ಘಾಟನೆ,ಬಹುತೇಕ ರೈಲ್ವೇ ಮಾರ್ಗಕ್ಕೆ ಚಾಲನೆ ಹಾಗೂ ಕೋವಿಡ್ ನಿಯಂತ್ರಣಕ್ಕೆ ರೈಲ್ವೇ ಐಸೋಲೆಷನ್ ಕೋಚ್ ನಿರ್ಮಾಣದಂತಹ ಅದೆಷ್ಟೋ ಜನಪರ ಯೋಜನೆಯನ್ನು ಕೈಗೆತ್ತಿಕೊಂಡ ಕೀರ್ತಿ ಸುರೇಶ ಅಂಗಡಿ ಅವರಿಗೆ ಸಲ್ಲುತ್ತದೆ.
Kshetra Samachara
24/09/2020 09:15 am