ಧಾರವಾಡ : ಅಗಲಿದ ಹಿರಿಯ ಕವಿ ಡಾ. ಚೆನ್ನವೀರ ಕಣವಿ ಅವರಿಗೆ ಮರಣೋತ್ತರ ರಾಷ್ಟ್ರಕವಿ ಎಂದು ಘೋಷಣೆ ಮಾಡಬೇಕು ಎಂದು ಗದಗ ತೋಂಟದಾರ್ಯ ಮಠದ ಸಿದ್ದರಾಮ ಶ್ರೀಗಳು ಹೇಳಿದರು.
ಧಾರವಾಡದ ಕಲ್ಯಾಣ ನಗರದ ಡಾ. ಚೆನ್ನವೀರ ಕಣವಿ ಅವರ ನಿವಾಸಕ್ಕೆ ಭೇಟಿ ನೀಡಿ, ಕಣವಿ ಅವರ ಅಂತಿಮ ದರ್ಶನ ಪಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಡಿನ ಎಲ್ಲ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಸಿಗಬೇಕೆಂಬುವುದು ಕಣವಿ ಅವರ ಉದ್ದೇಶವಾಗಿತ್ತು.
ರಾಷ್ಟ್ರಕವಿ ಸ್ಥಾನದೊಂದಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನೂ ಮರಣೋತ್ತರವಾಗಿ ನೀಡಬೇಕೆಂದು ಶ್ರೀಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
Kshetra Samachara
16/02/2022 02:00 pm