ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಪ್ರಯಾಣಿಕರ ಜೀವ ಉಳಿಸಿ ಪ್ರಾಣ ಬಿಟ್ಟ ಚಾಲಕ: ಮೃತನ ಕುಟುಂಬಕ್ಕೆ ಬೇಕಿದೆ ನೆರವಿನ ಹಸ್ತ

ಕುಂದಗೋಳ : ಇದು ವಿಧಿಯ ಆಟವೋ, ಚಾಲಕನ ಹಣೆ ಬರಹವೋ ಗೊತ್ತಿಲ್ಲ. ನಿನ್ನೆ ಬೆಳ್ಳಂಬೆಳಗ್ಗೆ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಶರೇವಾಡ ಟೋಲ್ ಬಳಿ ಟೈಯರ್ ಬ್ಲಾಸ್ಟ್ ಆದ ಸಾರಿಗೆ ಬಸ್ ನ್ನು ನಿಯಂತ್ರಿಸಲು ಹೋಗಿ 45 ಪ್ರಯಾಣಿಕರ ಜೀವ ಉಳಿಸಿ ತನ್ನ ಜೀವ ಬಲಿ ಕೊಟ್ಟ ಚಾಲಕನ ದಾರುಣ ಕಥೆ ಇದು.

ಗದಗ ಜಿಲ್ಲೆಯ ಬೆನಕೊಪ್ಪ ಗ್ರಾಮದ ಸಾರಿಗೆ ಬಸ್ ಚಾಲಕ ರವೀಂದ್ರ ವೀರಪ್ಪಾ ಬೀಂಗಿ ತನ್ನ ತಂದೆ ತಾಯಿಯ ಐವರು ಮಕ್ಕಳಲ್ಲಿ ಐದನೆಯವರು. 45 ವರ್ಷದ ರವೀಂದ್ರ 2006 ರಲ್ಲಿ ಬಿಎಂಟಿಸಿ ಚಾಲಕನಾಗಿ 17 ವರ್ಷ ಸೇವೆ ಸಲ್ಲಿಸಿ ಹುಬ್ಬಳ್ಳಿ ಡಿಪೋಗೆ ವರ್ಗಾವಣೆ ಪಡೆದು ಇಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ರು.

2004 ರಲ್ಲಿ ಗಾಯತ್ರಿ ಎಂಬುವವರನ್ನು ವಿವಾಹವಾಗಿದ್ದ ಇವರಿಗೆ ದೇವರು ಮುದ್ದಾದ ಇಬ್ಬರು ಮಕ್ಕಳನ್ನು ಕರುಣಿಸಿದ್ದ. ಅದರಲ್ಲಿ ಎರಡನೇ ಮಗ ವೀರೇಶ್ ಎಂಬಾತ ಬೋನ್ ಕ್ಯಾನ್ಸರ್ನಿಂದ ಸಾವನ್ನಪ್ಪಿದ್ದ. ಇದೀಗ ಮೃತ ರವೀಂದ್ರ ಪತ್ನಿ ಗಾಯತ್ರಿ, ಅತ್ತ ಮಗನನ್ನೂ ಕಳೆದುಕೊಂಡು ಇತ್ತ ಪತಿಯನ್ನೂ ಕಳೆದುಕೊಂಡು ಕಂಗಾಲಾಗಿದ್ದಾರೆ. ಮೃತ ಚಾಲಕನ ಕುಟುಂಬಕ್ಕೆ ಸರ್ಕಾರ ಹಾಗೂ ಸಾರಿಗೆ ಸಂಸ್ಥೆ ಸಹಾಯಕ್ಕೆ ಮುಂದಾಗಲಿ ಎನ್ನುವುದು ಜನಾಭಿಪ್ರಾಯ.

ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್, ಕುಂದಗೋಳ

Edited By : Somashekar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

11/10/2022 05:36 pm

Cinque Terre

101.02 K

Cinque Terre

4

ಸಂಬಂಧಿತ ಸುದ್ದಿ