ಧಾರವಾಡ: ಪಾಠ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಗಮನ ಬೇರೆಡೆ ಸೆಳೆಯದೇ ಇರಲಿ ಎಂದು ಶಿಕ್ಷಕರು ಜೋಕ್ಸ್ ಹಾಗೂ ಕಥೆಗಳನ್ನು ಹೇಳುವುದು ಸಹಜ. ಆದರೆ, ಧಾರವಾಡದಲ್ಲೊಬ್ಬ ಶಿಕ್ಷಕ ವಿಭಿನ್ನ ರೀತಿಯಲ್ಲಿ ಪಾಠ ಮಾಡಿರುವ ವೀಡಿಯೋ ಇದೀಗ ಸಖತ್ ವೈರಲ್ ಆಗಿದೆ.
ಹೌದು! ಧಾರವಾಡದ ಜೀನಿಯಸ್ ಕರಿಯರ್ ಅಕಾಡೆಮಿಯ ಶಿಕ್ಷಕ ಮಂಜುನಾಥ ಗಡ್ಡಿ ಎಂಬುವವರು ಹಾವ ಭಾವದ ಮೂಲಕ ಪಾಠ ಮಾಡಿದ್ದಾರೆ. ಈ ಶಿಕ್ಷಕನ ಪಾಠದ ವೈಖರಿ ಕಂಡು ವಿದ್ಯಾರ್ಥಿಗಳು ಬೆರಗಾಗಿ ಮೊಬೈಲ್‌ನಲ್ಲಿ ಆ ವೀಡಿಯೋ ಸೆರೆ ಹಿಡಿದಿದ್ದಾರೆ. ಇತಿಹಾಸದ ಆಂಗ್ಲೋ-ಮರಾಠಾ ಯುದ್ಧದ ವಿಶ್ಲೇಷಣೆಯನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿ ಕೊಟ್ಟಿದ್ದಾರೆ. ಈ ಶಿಕ್ಷಕನ ಪಾಠದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
Kshetra Samachara
05/10/2021 10:28 pm