ಅಳ್ನಾವರ: ತಾಲೂಕಿನ ಬೆನಚಿ ಗ್ರಾಮ ಪಂಚಾಯಿತಿ ವ್ಯಾಪಿಗೆ ಒಳಪಡುವ ಅತಿ ಚಿಕ್ಕ ಕುಗ್ರಾಮವಾದ ಕಿವಡೆಬೈಲ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಗ್ರಾಮದ ಚಿಕ್ಕ ಉದ್ಯಮಿ ಶ್ರೀನಿವಾಸ ಪಾಟೀಲ ರವರು ಇಪ್ಪತ್ತೈದು ಸಾವಿರ ರೂ ಮೌಲ್ಯ ದ ಪ್ರಿಂಟರ್,ಝರಾಕ್ಷ ಮಷೀನ್ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕಾಗಿ 5 ರೌಂಡ್ ಟೇಬಲ್ ಗಳನ್ನು ತಮ್ಮ ಸ್ವಂತ ಹಣದಲ್ಲಿ ದಾನವಾಗಿ ನೀಡಿದರು.
ಬೆನಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅತಿ ಚಿಕ್ಕ ಗ್ರಾಮವೇ ಕಿವಡೆಬೈಲ್.ಇಲ್ಲಿ ಹೆಚ್ಚಾಗಿ ಗೌಳಿ ಜನಾಂಗ ವಾಸಿಸುತ್ತಿದ್ದು,ಮೂಲ ಭೂತ ಸೌಕರ್ಯಗಳಿಂದ ಕೊಂಚ ವಂಚಿತವಾಗಿದೆ.ಅದೇ ಗ್ರಾಮದ ನಿವಾಸಿ ಶ್ರೀನಿವಾಸ ಪಾಟೀಲ್ ರವರು ಗೋವಾ ದಲ್ಲಿ ಚಿಕ್ಕ ದಾದ ಉದ್ಯಮ ನಡೆಸುತ್ತಾರೆ.ಹುಟ್ಟಿ ಬೆಳೆದ ಗ್ರಾಮದ ಜನತೆಗೆ,ಗ್ರಾಮಕ್ಕೆ ಏನಾದರೂ ಸಹಾಯ ಮಾಡಬೇಕು ಎನ್ನುವುದು ಇವರ ಹಂಬಲ.
ಗೋವಾ ದಲ್ಲೇ ಉಪಜೀವನ ನಡೆಸುತ್ತಿರುವ ಶ್ರೀನಿವಾಸ ಪಾಟೀಲ್ ರವರು ಎರಡು ಮೂರು ತಿಂಗಳಿಗೊಮ್ಮೆ ತಮ್ಮ ಸ್ವಂತ ಗ್ರಾಮಕ್ಕೆ ಬಂದು ಶಾಲೆಯ ಮಕ್ಕಳಿಗಾಗಿ ಕೈಲಾದಷ್ಟು ಸಹಾಯ ಮಾಡುತ್ತಾರೆ.
ಈ ಸಲ ಶಾಲೆಗೆ ಹಾಗೂ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ದೊರಕಲಿ ಎಂಬ ಮನೋಭಾವನೆ ಇಂದ ಝರಾಕ್ಸ ಮಷೀನ್,ರೌಂಡ್ ಟೇಬಲ್ ಮತ್ತು ಕಲಿಕಾ ಸಾಮಗ್ರಿಗಳನ್ನು ದಾನವಾಗಿ ನೀಡಿ ಎಲ್ಲರ ಮನಸನ್ನು ಗೆದ್ದಿದ್ದಾರೆ.
ಈ ಸಂದರ್ಭದಲ್ಲಿ ಅವರಿಗೆ ಶಾಲಾ ಶಿಕ್ಷಕರು,ಆಡಳಿತ ಮಂಡಳಿ,ಹಾಗೂ ಬೆನಚಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂದೀಪ್ ಪಾಟೀಲ್ ರವರು ಶಾಲು ಹೊದಿಸಿ ಹೂಮಾಲೆ ಹಾಕಿ ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಧಾರವಾಡ ಶಿಕ್ಷಣ ಇಲಾಖೆ ಅಧಿಕಾರಿಗಳು, ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ:ಮಹಾಂತೇಶ ಪಠಾಣಿ
ಪಬ್ಲಿಕ್ ನೆಕ್ಸ್ಟ್,ಅಳ್ನಾವರ
Kshetra Samachara
01/10/2021 05:57 pm