ಧಾರವಾಡ: ಯುದ್ಧಪೀಡಿತ ಉಕ್ರೇನ್ ದೇಶದಲ್ಲಿ ಸಿಲುಕಿಕೊಂಡಿದ್ದ ಧಾರವಾಡದ ಮಿಲನ್ ದೇವಮಾನೆ ನಿನ್ನೆ ಸಂಜೆ ಸುರಕ್ಷಿತವಾಗಿ ಧಾರವಾಡಕ್ಕೆ ಬಂದು ತಲುಪಿದ್ದಾರೆ.
ಉಕ್ರೇನ್ ದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವುದಕ್ಕಾಗಿ ತೆರಳಿದ್ದ ಮಿಲನ್, ರಷ್ಯಾ ಮತ್ತು ಉಕ್ರೇನ್ ದೇಶಗಳ ಮಧ್ಯೆ ನಡೆದ ಯುದ್ಧದಿಂದಾಗಿ ಉಕ್ರೇನ್ ದೇಶದಲ್ಲಿ ಸಿಲುಕಿ ವಾಪಸ್ ಭಾರತಕ್ಕೆ ಬರಲಾಗದೇ ಅಲ್ಲೇ ಸಿಲುಕಿಕೊಂಡಿದ್ದ. ಸುರಕ್ಷಿತವಾಗಿ ಧಾರವಾಡಕ್ಕೆ ಬರಲು ಅನುವು ಮಾಡಿಕೊಟ್ಟ ಭಾರತ ಸರ್ಕಾರಕ್ಕೆ ಮಿಲನ್ ಧನ್ಯವಾದ ಸಲ್ಲಿಸಿದ್ದಾರೆ. ಅಲ್ಲದೇ ಉಕ್ರೇನ್‌ನಲ್ಲಿ ನಡೆದ ಯುದ್ಧದ ಸಂದರ್ಭವನ್ನು ಬಿಚ್ಚಿಟ್ಟಿದ್ದಾರೆ.
ಧಾರವಾಡದ ಮಾಳಮಡ್ಡಿಯಲ್ಲಿರುವ ವೆಂಕಟೇಶ್ವರ ಅಪಾರ್ಟ್‌ಮೆಂಟ್‌ನಲ್ಲಿರುವ ಮಿಲನ್ ಅವರ ಕುಟುಂಬದ ಸದಸ್ಯರು, ಮಿಲನ್ ವಾಪಸ್ ಸುರಕ್ಷಿತವಾಗಿ ಬಂದಿದ್ದಕ್ಕೆ ಹರ್ಷಗೊಂಡಿದ್ದಾರೆ. ಉಕ್ರೇನ್‌ನಿಂದ ಮುಂಬೈಗೆ ಬಂದು ಮುಂಬೈನಿಂದ ಹುಬ್ಬಳ್ಳಿ ತಲುಪಿ ಇದೀಗ ಮಿಲನ್ ಸುರಕ್ಷಿತವಾಗಿ ತನ್ನ ಗೂಡು ಸೇರಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
09/03/2022 02:51 pm