ಹುಬ್ಬಳ್ಳಿ: ಖಾಸಗಿ ಶಾಲೆಯ ಮೈದಾನದಲ್ಲಿ ದುಶ್ಚಟ ಮಾಡಬೇಡಿ ಅಂತ ಬುದ್ಧಿ ಹೇಳಿದಕ್ಕೆ ಶಿಕ್ಷಕರ ಮೇಲೆ ನಶೆಯಲ್ಲಿದ್ದ ಯುವಕರು ಹಲ್ಲೆಗೆ ಯತ್ನಿಸಿದ ಘಟನೆ ನಗರದ ಹಳೇ ಹುಬ್ಬಳ್ಳಿಯ ವಿವೇಕಾನಂದ ಸ್ಕೂಲ್‌ನಲ್ಲಿ ನಡೆದಿದೆ.
ವಿವೇಕಾನಂದ ಶಾಲೆಯ ಮೈದಾನದಲ್ಲಿ ಕೆಲವು ಯುವಕರು ಹಲವು ದಿನಗಳಿಂದ ದುಶ್ಚಟವನ್ನು ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಶಾಲೆಯ ಸೆಕ್ಯೂರಿಟಿ ಗಾರ್ಡ್ ಹಾಗೂ ಶಿಕ್ಷಕರು ಬುದ್ಧಿವಾದ ಹೇಳಿದಕ್ಕೆ ಅವರ ಮೇಲೆಯೇ ನಶೆಯಲ್ಲಿದ್ದ ಯುವಕರು ಚೇರ್ ತೆಗೆದುಕೊಂಡು ಹಲ್ಲೆಗೆ ಮುಂದಾಗಿದ್ದಾರೆ. ಆಗ ಶಾಲಾ ಸಿಬ್ಬಂದಿ ಈ ವಿಡಿಯೋ ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದ ಹಾಗೆ ಅಲರ್ಟ್ ಆದ ಹಳೇ ಹುಬ್ಬಳ್ಳಿಯ ಪೊಲೀಸರು ಕಾರ್ತಿಕ ಹಾಗೂ ಅಜಯ ಎಂಬ ಯುವಕರನ್ನು ವಶಕ್ಕೆ ಪಡೆದು ಸುಮೋಟೋ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
Kshetra Samachara
14/09/2022 11:23 am