ಧಾರವಾಡ : ಇತ್ತೀಚಿನ ದಿನಗಳಲ್ಲಿ ಕೆಲವು ಮಕ್ಕಳಿಗೆ 108 ಆಂಬುಲೆನ್ಸ್ ವಾಹನ ತವರು ಮನೆಯಾಗುತ್ತಿದೆ.ಆಸ್ಪತ್ರೆಗೆ ಸಾಗಿಸುತ್ತಿದ್ದ ಮಾರ್ಗ ಮಧ್ಯದಲ್ಲಿ ಗಂಡು ಮಗುವಿಗೆ ಗರ್ಭಿಣಿ ಮಹಿಳೆಯೊಬ್ಬರು 108 ಆ್ಯಂಬುಲೆನ್ಸ್ ನಲ್ಲಿ ಜನ್ಮ ನೀಡಿದ ಘಟನೆ ಹೈಕೋರ್ಟ್ ಬಳಿ ಇಂದು ನಡೆದಿದೆ
ಧಾರವಾಡ ತಾಲೂಕಿನ ಮದಿಕೊಪ್ಪ ಗ್ರಾಮದ ಸುಮಿತ್ರಾ ಶಿಗಳ್ಳಿ ಎಂಬ ಗರ್ಭಿಣಿ ಮಹಿಳಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡ ಪರಿಣಾಮ ಆಸ್ಪತ್ರೆಗೆ ಸೇರಿಸಲು ಕರೆದೊಯ್ಯಲಾಗುತ್ತಿತ್ತು.ಆದ್ರೆ ಮಾರ್ಗಮದ್ಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.108 ಆಂಬ್ಯುಲೆನ್ಸ್ ಸಿಬ್ಬಂದಿಗಳು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದು, ಸದ್ಯ ತಾಯಿ ಮಗು ಆರೋಗ್ಯವಾಗಿದ್ದಾರೆ.,ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಬ್ಬಂದಿಗಳಾದ ಮಂಜುನಾಥ ಮುಂದಿನಮನಿ, ಶುಶ್ರೂಶಕರು, ದೇವೇಂದ್ರ ಎಸ್ ಗಂಗಾಧರ ಇದ್ದರು.
Kshetra Samachara
24/09/2020 09:32 pm