ಕಲಘಟಗಿ:ತಾಲೂಕಿನ ಮುಕ್ಕಲ್ ಗ್ರಾಮದಲ್ಲಿನ ಹೊಲದಲ್ಲಿ ಬಂದಿದ್ದ ಚೌಸಿಂಗ್ ಮರಿಯನ್ನು ರಕ್ಷಿಸಿಸಿದ ರೈತ ಅರಣ್ಯ ಇಲಾಖೆಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಗ್ರಾಮದ ಶೇಖಪ್ಪ ಹುಲಿಕಟ್ಟಿ ಎಂಬುವರ ಹೊಲದಲ್ಲಿ ಸಿಕ್ಕಂತ ಚೌಸಿಂಗ್ ಮರಿ (ನಾಲ್ಕು ಕೊಂಬಿನ ಹುಲ್ಲೆ) ಯನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ತೆರಳಿ ಚೌಸಿಂಗ್ ಮರಿಯನ್ನು ಅರಣ್ಯಕ್ಕೆ ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ದೇವೇಂದ್ರಗೌಡ ವೀರಭದ್ರಗೌಡ,ಬಾಬು ಗೌಡ ಮುದಿಗೌಡ,ಶಂಕರಗೌಡ ಮುದಿಗೌಡ,ಮುತ್ತಣ್ಣ ಮುದಿಗೌಡ,ಲಿಂಗ ರೆಡ್ಡಿ ನಡುವಿನಮನಿ ಉಪಸ್ಥಿತರಿದ್ದರು.
Kshetra Samachara
17/12/2020 08:53 pm