ಹುಬ್ಬಳ್ಳಿ: ಸಾರಿಗೆ ಬಸ್ ಬಂದ್ ಹಿನ್ನೆಲೆಯಲ್ಲಿ ಬಡ ಮಧ್ಯಮ ವರ್ಗದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅದರಲ್ಲೂ ಮಹಿಳೆಯೊಬ್ಬರು ತಮ್ಮ ಮಾವನ ಅಂತ್ಯ ಸಂಸ್ಕಾರಕ್ಕೂ ಹೋಗಲು ಸಾಧ್ಯವಾಗದ ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ಕಣ್ಣೀರು ಹಾಕಿದ ಘಟನೆ ನಡೆದಿದೆ.
ಹೌದು. ಮೂಲತ ಕೊಪ್ಪಳದ ಕುಷ್ಟಗಿ ಮೂಲದ ದೇವಮ್ಮ ಎಂಬುವವರೇ ಪರದಾಟ ನಡೆಸಿದ ಮಹಿಳೆ. ಕೂಲಿ ಕೆಲಸಕ್ಕೆಂದು ದೇವಮ್ಮ ಮಂಗಳೂರಿನಲ್ಲಿ ವಾಸವಾಗಿದ್ದರು. ಆದ್ರೆ ಅವರ ಮಾವ ಮೃತಪಟ್ಟಿರುವ ಸುದ್ದಿ ಕೇಳಿ ಐದು ವರ್ಷದ ಮಗುವಿನೊಂದಿಗೆ ಮಂಗಳೂರಿನಿಂದ ಹುಬ್ಬಳ್ಳಿಗೆ ಬಸ್ ನಲ್ಲಿ ನಿನ್ನೆ ಸಾಯಂಕಾಲ ಬಂದು ಇಳಿದಿದ್ದಾರೆ. ಆದ್ರೆ ಸಾರಿಗೆ ಸಿಬ್ಬಂದಿ ಮುಷ್ಕರ ಇರುವದರಿಂದ ಕೊಪ್ಪಳ ಕಡೆ ಯಾವುದೇ ಬಸ್ ವ್ಯವಸ್ಥೆ ಇಲ್ಲ. ಹೀಗಾಗಿ ಹಳೇ ಬಸ್ ನಿಲ್ದಾಣದಲ್ಲಿ ತನ್ನ ಐದು ವರ್ಷ ಹೆಣ್ಣು ಮಗು ಜೊತೆ ಪರದಾಟ ನಡೆಸುತ್ತಿದ್ದಾರೆ.
ಸಧ್ಯ ಕುಷ್ಟಗಿಗೆ ಹೋಗಲು ಬಸ್ ಇಲ್ಲದೆ, ಖಾಸಗಿ ವಾಹನ ಕೇಳಿದ್ರೆ ದುಪ್ಪಟ್ಟು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಹೀಗಾಗಿ ದೇವಮ್ಮ ಕಂಗಾಲಾಗಿ ಬಸ್ ನಿಲ್ದಾಣದಲ್ಲಿ ಕುಳಿತ್ತಿದ್ದಾಳೆ.
Kshetra Samachara
13/12/2020 10:54 am