ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಳದಿ ಬಟ್ಟೆ ಧರಿಸಿ ಹಳ್ಳಿ ಜನರಿಗೆ ಸಹಾಯ ಮಾಡುತ್ತಿದೆ ಯುವಕ ಯುವತಿಯರ ಪಡೆ

ವರದಿ: ಈರಣ್ಣ ವಾಲಿಕಾರ

ಹುಬ್ಬಳ್ಳಿ- ಉತ್ತರ ಕರ್ನಾಟಕ ಸಂಜೀವಿನಿ ಎಂದೇ ಖ್ಯಾತಿ ಪಡೆದಿರುವ ಕಿಮ್ಸ್ ಗೆ, ಸಾವಿರಾರು ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಇಂತಹ ಸಂದರ್ಭದಲ್ಲಿ ಬಂದ ರೋಗಿಗಳಿಗೆ ಹಾಗೂ ಅನಕ್ಷರಸ್ಥರಿಗೆ ವಿವರಣೆ ನೀಡಿ ಚಿಕಿತ್ಸೆಗೆ ಪಡೆದುಕೊಳ್ಳಲು ನಮ್ಮಿಂದ ನಿಮಗೆ ಸಹಾಯ ಮಾಡಬಹುದೆ? ಎಂಬ ಹೆಸರಿನೊಂದಿಗೆ ಸಂಸ್ಥೆಯೊಂದು ನಿರಂತರವಾಗಿ ಶ್ರಮಿಸುತ್ತಿದೆ .

ಹೀಗೆ ಹಳದಿ ಬಟ್ಟೆಯನ್ನು ಧರಿಸಿ, ವಯಸ್ಕರಿಗೆ, ಮಹಿಳೆಯರಿಗೆ, ಅನಕ್ಷರಸ್ಥರಿಗೆ ವಾರ್ಡ್ ಗಳನ್ನು ತೋರಿಸುತ್ತಾ, ವೃದ್ಧರನ್ನು ಕೈ ಹಿಡಿದುಕೊಂಡು ಸಹಾಯ ಮಾಡುತ್ತಿರುವ, ಈ ಯುವಕ ಯುವತಿಯರು ಮಜೇಥಿಯಾ ಫೌಂಡೆಶನ್ ವಿಧ್ಯಾರ್ಥಿಗಳು. ಇವರು ಸುಮಾರು ಒಂದು ತಿಂಗಳಿನಿಂದ ದಿನಂಪ್ರತಿ ಈ ಕಾರ್ಯ ಮಾಡುತ್ತಿರುವುದರಿಂದ ಕಿಮ್ಸ್ ಗೆ ಬರುವ ಹಳ್ಳಿ ಜನರಿಗೆ ತುಂಬ ಅನುಕೂಲವಾಗಿದ್ದು. ಹಳ್ಳಿ ಜನರು ಪಬ್ಲಿಕ್ ನೆಕ್ಸ್ಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಕಿಮ್ಸ್ ಗೆ ಬರುವ ಅದೆಷ್ಟೋ ರೋಗಿಗಳ ಸಂಬಂಧಿಗಳಿಗೆ, ಕಿಮ್ಸ್ ನಲ್ಲಿ ರುವ ಚಿಕಿತ್ಸೆ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಇದನ್ನು ಮನಗಂಡು ಜೇಥಿಯಾ ಫೌಂಡೇಶನ್ ಸಂಸ್ಥಾಪಕರಾದ ಜೀತೇಂದ್ರ ಮಜೇಥಿಯಾ "ಸಹಾಯ" ಎಂಬ ಹೆಸರಿನೊಂದಿಗೆ ಸುಮಾರು ನಿಸ್ವಾರ್ಥ ಇಲ್ಲದೇ ಸೇವೆ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ನಿಸ್ವಾರ್ಥ ಸೇವೆ ಮಾಡುತ್ತಿರುವ ಮಜೇಥಿಯಾ ಫೌಂಡೇಶನ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಇವರಂತೇ ಎಲ್ಲರೂ ಸಹ ಬಡವರಿಗೆ ಅನಕ್ಷರಸ್ಥರಿಗೆ ಸಹಾಯ ಮಾಡಲು ಮುಂದೆ ಬರಬೇಕೆಂಬುವುದು ಎಲ್ಲರ ಆಶಯ......!

Edited By : Nagesh Gaonkar
Kshetra Samachara

Kshetra Samachara

05/12/2020 10:31 pm

Cinque Terre

60.68 K

Cinque Terre

38

ಸಂಬಂಧಿತ ಸುದ್ದಿ