ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪುಂಗಿಕಾಯಿಗಳಿಗೀಗ ಬಂಗಾರದ ಬೆಲೆಯಂತೆ

ಧಾರವಾಡ: ಪುಂಗಿಕಾಯಿಗಳೆಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ.. ಹಾವಾಡಿಗರ ಕೈಯಲ್ಲಿ ಈ ಪುಂಗಿಕಾಯಿಗಳು ಹೆಚ್ಚು ಇರ್ತಾ ಇದ್ವು. ಇದೀಗ ಹಾವಾಡಿಗರು ಕೂಡ ಕಾಣಿಸೋದೇ ಇಲ್ಲ. ಆದರೂ ಈ ಪುಂಗಿಕಾಯಿಗಳಿಗೆ ಬಂಗಾರದ ಬೆಲೆ ಬಂದಿದೆ.

ಈ ಪುಂಗಿಕಾಯಿಯ . ಬಳ್ಳಿ ಸಾಮಾನ್ಯವಾಗಿ ಗುಡ್ಡಗಾಡು ಪ್ರದೇಶ ಹಾಗೂ ಬೇಲಿಗಳಲ್ಲಿ ಹೆಚ್ಚು ಕಾಣಸಿಗುತ್ತದೆ. ಮುಂಭಾಗ ಉದ್ದನೆ ಆಕಾರ ನಡುವೆ ಗೋಲಾಕಾರದ ಆಕೃತಿಯನ್ನು ಈ ಪುಂಗಿಕಾಯಿ ಹೊಂದಿರುತ್ತದೆ. ಆದರೆ, ಇದೀಗ ಎರಡೂ ಕಡೆ ಉದ್ದನೆ ಹಾಗೂ ಮಧ್ಯದಲ್ಲಿ ಗೋಲಾಕಾರದ ಆಕೃತಿ ಹೊಂದಿದ ಪುಂಗಿಕಾಯಿಗಳಿಗೆ ಬೇಡಿಕೆ ಬಂದಿದೆ.

ವಾಮಾಚಾರಕ್ಕೆ ಈ ಪುಂಗಿಕಾಯಿಗಳನ್ನು ಕೇಳಲಾಗುತ್ತಿದೆಯಂತೆ. ಹುಬ್ಬಳ್ಳಿ, ಧಾರವಾಡದಲ್ಲಿ ಅನೇಕರು ಈ ಪುಂಗಿಕಾಯಿ ಹಿಂದೆ ಬಿದ್ದಿದ್ದು, ಎರಡೂ ಕಡೆಗಳಲ್ಲಿ ಉದ್ದನೆ ಆಕೃತಿ ಇರುವ ಪುಂಗಿಕಾಯಿಗಳನ್ನು ಲಕ್ಷಗಟ್ಟಲೆ ಹಣ ಕೊಟ್ಟು ಕೊಂಡುಕೊಳ್ಳುತ್ತಿದ್ದಾರಂತೆ. ಇವುಗಳನ್ನು ಕೊಂಡುಕೊಳ್ಳುತ್ತಿರುವವರಾದರೂ ಯಾರು? ಏತಕ್ಕಾಗಿ ಇಂತಹ ಪುಂಗಿಕಾಯಿಗಳನ್ನು ಕೇಳುತ್ತಿದ್ದಾರೆ ಎಂಬ ಖಚಿತ ಮಾಹಿತಿ ಗೊತ್ತಾಗಿಲ್ಲ. ಕೆಲವರು ವಾಮಾಚಾರಕ್ಕೆ ಎಂದು ಊಹೆ ಮಾಡಿದ್ದಾರೆ.

ಆದರೆ, ಇದೀಗ ಜಿಲ್ಲೆಯಲ್ಲಿ ಪುಂಗಿಕಾಯಿ ಹುಡುಕಾಟ ಜೋರಾಗಿ ನಡೆದಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Edited By :
Kshetra Samachara

Kshetra Samachara

03/12/2020 06:05 pm

Cinque Terre

29.68 K

Cinque Terre

2

ಸಂಬಂಧಿತ ಸುದ್ದಿ