ವರದಿ: ಈರಣ್ಣ ವಾಲಿಕಾರ
ಹುಬ್ಬಳ್ಳಿ: ಅವರು ಕನ್ನಡ ಚಿತ್ರರಂಗ ಕಂಡ ಅಪ್ರತಿಮ ನಟ. ಆತ 630 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡುವ ಮೂಲಕ ಕರ್ನಾಟಕದ ಪ್ರೇಕ್ಷಕರನ್ನು ನಕ್ಕು ನಲಿಸುತ್ತಿದ್ದರು. ಆದ್ರೆ ಸದ್ಯ ಅವರು ಕಣ್ಣೀರಿನಲ್ಲಿ ಕೈ ತೊಳೆಯುವ ಪ್ರಸಂಗ ಬಂದೊದಗಿದೆ. ಅಷ್ಟಕ್ಕೂ ಆತ ಯಾರು ಅಂತಿರಾ ಈ ಸ್ಟೋರಿ ನೋಡಿ....
ಹೀಗೆ ವ್ಹೀಲ್ ಚೇರ್ ಮೇಲೆ ಕುಳಿತಿರುವ ಇವರ ಹೆಸರು, ಕನ್ನಡದ ಹಾಸ್ಯ ನಟ ಸತ್ಯಜೀತ್. ಮೂಲತಃ ಹುಬ್ಬಳ್ಳಿ ನಾಗೆಶಟ್ಟಿಕೊಪ್ಪದ ನಿವಾಸಿ, ಚಿಕ್ಕ ವಯಸ್ಸಿನಲ್ಲೇ ರಂಗ ಭೂಮಿ ಕಲಾವಿದನಾಗಿ, ನಂತರ ಸಾರಿಗೆ ಸಂಸ್ಥೆಯಲ್ಲಿ ಡ್ರೈವರಾಗಿ ಕಾರ್ಯ ನಿರ್ವಹಿಸುವ ವೇಳೆ, ಆಕಸ್ಮಿಕವಾಗಿ ನಟನೆ ಅವಕಾಶ ಬಂದೊದಗಿತ್ತು. ಅವಕಾಶವನ್ನೆ ಸದುಪಯೋಗ ಪಡೆದುಕೊಂಡ ಸತ್ಯಜೀತ್. ಸಿನೆಮಾ ರಂಗದಲ್ಲಿ ಮಿಂಚುತ್ತಾ ಬಂದಿದ್ದಾರೆ. ಕನ್ನಡದ ದಿಗ್ಗಜರಾದ ಡಾ. ರಾಜಕುಮಾರ ವಿಷ್ಣುವರ್ಧನ್, ಅಂಬರೀಶ್, ದ್ವಾರಕೀಶ್, ಶಿವರಾಜ್ ಕುಮಾರ್ , ಪುನೀತ್ ರಾಜಕುಮಾರ, ಸುದೀಪ್, ಉಪೇಂದ್ರ, ದುನಿಯಾ ವಿಜಯ್ ಸೇರಿದಂತೆ ಸಾಕಷ್ಟು ದೊಡ್ಡ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಆಪ್ತ ಮಿತ್ರ, ವಿರಾಟ, ಅಪ್ಪು, ರನ್ನ, ಅರಸು, ಭದ್ರಾ, ಕಲ್ಪನಾ, ಲಕ್ಕಿ, ಉಪ್ಪಿ -2 , ರಣವಿಕ್ರಮ ಸೇರಿದಂತೆ ಹಲವು ಸಿನಿಮಾಗಳಲ್ಲಿ ಮೇನ್ ರೊಲನಲ್ಲಿ ಮಿಂಚಿದ್ದಾರೆ. ಆದ್ರೆ ಕೆಲವು ವರ್ಷಗಳ ಹಿಂದೆ ಅನಾರೋಗ್ಯ ಹಿನ್ನೆಲೆ, ತಮ್ಮ ಎಡಗಾಲು ಕಳೆದುಕೊಂಡು ಈಗ ಹಣದ ಕೊರತೆ ಎದುರಿಸುತ್ತಾ ಕಣ್ಣೀರು ಹಾಕುತ್ತಿದ್ದಾರೆ....
ತಮ್ಮ ನಟನೆಯಲ್ಲಿ ದುಡಿದ ಹಣವನ್ನು, ತಮ್ಮ ಮಗಳಿಗೆ ಉತ್ತಮ ಶಿಕ್ಷಣ ಕಲಿಸುವುದು ಜೊತೆಗೆ ತನ್ನ ಎಲ್ಲಾ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ. ಆದ್ರೆ ಸ್ವಂತ ಅಪ್ಪನಿಗೆ ಗ್ಯಾಂಗ್ರೀನ್'ನಿಂದ ಒಂದು ಕಾಲು ಕಳೆದುಕೊಂಡಿದ್ದರು, ಸಹ ಅವಳು ಯಾವುದೇ ರೀತಿಯಲ್ಲಿ ಸಹಾಯ ಮಾಡದೇ, ಇರುವುದು ಎಲ್ಲರನ್ನೂ ಅಚ್ಚರಿಗೊಳಿಸಿದೆ. ಇನ್ನೂ ದುಡಿಯೋ ಶಕ್ತಿ ಇಲ್ಲದೇ ಸಹಾಯಕ್ಕೆ ಅಂಗಲಾಚಿದ್ದಾರೆ, ಆಸ್ಪತ್ರೆ ವೆಚ್ಚ ಭರಿಸಲು, ಮನೆ ಬಾಡಿಗೆ ಕಟ್ಟಲು ಸಂಕಷ್ಟ ಎದುರಿಸುತ್ತಿದ್ದಾರೆ. ಸದ್ಯ ಇವರ ಅನಾರೋಗ್ಯ ಹಿನ್ನೆಲೆ ನಟನೆಗೆ ಅವಕಾಶ ಇಲ್ಲದೇ ಹಿರಿಯ ನಟ ಸತ್ಯಜೀತ್ ಮಾಧ್ಯಮದ ಮುಂದೆ ಸತ್ಯಜಿತ್ ತಮ್ಮ ಅಂತರಾಳವನ್ನು ಬಿಚ್ಚಿಟ್ಟಿದ್ದಾರೆ........!
Kshetra Samachara
01/12/2020 04:27 pm