ಕುಂದಗೋಳ : ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ದೇಶಾದ್ಯಂತ ಇಂದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಸಭೆ ಸಮಾರಂಭ ಸೇರಿದಂತೆ ವಿಧದ ರೀತಿಯಲ್ಲಿ ಜನ ಗೌರವ ಸಲ್ಲಿಸಿ ಸಂವಿಧಾನ ಸಮರ್ಪಣಾ ದಿನವನ್ನು ನೆನಪಿಸಿ ಕೊಳ್ಳುತ್ತಿದ್ದಾರೆ.
ಆದ್ರೆ ಈ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಇಲ್ಲೋಬ್ರು ಮಾಡಿದ ಕಾರ್ಯ ಇಂದು ಎಂದಿಗೂ ಶ್ಲಾಘನೀಯವಾಗಿದೆ.
ಕುಂದಗೋಳ ಪಟ್ಟಣದಲ್ಲಿರುವ ಅಂಬೇಡ್ಕರ್ ಮೂರ್ತಿಯನ್ನು ಇವ್ರು ಸ್ವತಃ ನೀರು ಹಾಕಿ ಸ್ವಚ್ಚಗೊಳಿಸಿ ಹಾರ ಹಾಕಿ ಪೂಜೆ ಸಲ್ಲಿಸಿ, ವಿಶಿಷ್ಟವಾಗಿ ಸಂವಿಧಾನ ಸಮರ್ಪಣಾ ದಿನ ಆಚರಿಸಿದ್ದಾರೆ.
ಇಷ್ಟೇಲ್ಲಾ ಮಾಡಿದ ಇವರು ಇಂದು ಹಾಕಿದ ಹಾರವನ್ನು ಹಾಗೇ ಹೂ ಗಳನ್ನು ಸ್ವತಃ ತಾವೇ ನಾಳೆ ಬೆಳಿಗ್ಗೆ ಬಂದು ತೆಗೆದು ಮತ್ತೆ ಅಂಬೇಡ್ಕರ್ ಮೂರ್ತಿಯನ್ನು ಶುಭ್ರವಾಗಿಡುವ ಸತ್ಕಾರ್ಯಕ್ಕೆ ಜೈ ಎಂದಿದ್ದಾರೆ.
ಕೇಳಿದ್ರಲ್ಲಾ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಅಂಬೇಡ್ಕರ್ ಮೂರ್ತಿಯನ್ನ ಸ್ವಚ್ಚವಾಗಿಡುವುದರ ಜೊತೆ ಸಂವಿಧಾನದ ಅಂಶಗಳನ್ನ ಕಾಪಾಡಬೇಕು, ಎನ್ನುವ ಇವರ ಈ ಕಾಯಕ ನಿತ್ಯ ನಿರಂತರ ಎಂಬ ಮಾತನ್ನು ಮೆಚ್ಚಲೇಬೇಕು.
Kshetra Samachara
26/11/2020 08:52 pm