ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅದು ಭಿಕ್ಷೆ ಎಂಬುದು ಆ ಬಾಲಕಿಗೆ ಗೊತ್ತೇ?

ವರದಿ: ಪ್ರವೀಣ ಓಂಕಾರಿ

ಧಾರವಾಡ: ಹೆತ್ತವಳ ಕೈ ತುತ್ತು ಉಂಡು, ಗೆಳತಿಯರೊಂದಿಗೆ ಆಟವಾಡುತ್ತ ಬೆಳೆಯುವ ವಯಸ್ಸು ಈ ಬಾಲಕಿಯದ್ದು. ಬಹುಶಃ ಐದಾರು ವರ್ಷ ವಯಸ್ಸು ಇರಬಹುದು ಈ ಬಾಲಕಿಗೆ. ಪ್ರಪಂಚದ ಜ್ಞಾನವನ್ನೂ ಅರಿಯದ ಈ ಪುಟ್ಟ ಬಾಲಕಿ ಕೈಯಲ್ಲಿ ಭಿಕ್ಷಾ ಪಾತ್ರೆ.

ಅಯ್ಯೋ ದುರ್ವಿಧಿಯೇ ಭಾರತ ಬಡ ರಾಷ್ಟ್ರ ಎಂಬುದನ್ನು ಈ ಒಂದು ವೀಡಿಯೋ ತುಣುಕು ಸಾಬೀತುಪಡಿಸುತ್ತದೆ. ಭಾರತ ಬಡ ರಾಷ್ಟ್ರವೇ ಇರಬಹುದು. ಆದ್ರೆ, ಅದನ್ನೇ ಬಂಡವಾಳವನ್ನಾಗಿರಿಸಿಕೊಂಡು ಇಂತಹ ಪುಟ್ಟ ಕಂದಮ್ಮನನ್ನು ಭಿಕ್ಷಾಟನೆಗೆ ದೂಡುವುದು ನ್ಯಾಯವೇ? ಆ ಬಾಲಕಿ ಬೇಡುತ್ತಿರುವುದು ಭಿಕ್ಷೆ ಎಂದಾದರೂ ಆ ಬಾಲಕಿಗೆ ತಿಳಿದಿದೆಯೋ ಗೊತ್ತಿಲ್ಲ.

ಈ ದೃಶ್ಯ ಕಂಡು ಬಂದದ್ದು ಧಾರವಾಡದ ಬಸ್ ನಿಲ್ದಾಣದಲ್ಲಿ. ಅನೇಕರು ತಮ್ಮ ಮಕ್ಕಳ ಕೈಯಲ್ಲಿ ಭಿಕ್ಷಾ ಪಾತ್ರೆ ನೀಡಿ ಚಿಲ್ಲರೆ ಭಿಕ್ಷೆ ಎತ್ತಲು ಬಿಡುತ್ತಿದ್ದಾರೆ. ಎಲ್ಲರಂತೆ ಆಟವಾಡಿ, ಓದಿ ನಲಿಯುವ ಇಂತಹ ಪುಟಾಣಿಗಳ ಕೈಗೆ ಪೆನ್ನು, ಪೆನ್ಸಿಲ್, ಪುಸ್ತಕ ನೀಡುವ ಬದಲಿಗೆ ಭಿಕ್ಷಾ ಪಾತ್ರೆ ನೀಡುತ್ತಿರುವುದು ದುರ್ದೈವವೇ ಸರಿ.

Edited By : Manjunath H D
Kshetra Samachara

Kshetra Samachara

21/11/2020 12:08 pm

Cinque Terre

66.74 K

Cinque Terre

11

ಸಂಬಂಧಿತ ಸುದ್ದಿ