ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಅಳಿವಿನಂಚಿನಲ್ಲಿರುವ ಕಲ್ಲು ವಡ್ಡರ ಸಮುದಾಯ

ಪಬ್ಲಿಕ್ ನೆಕ್ಸ್ಟ್ ವಿಶೇಷ : ವಿನೋದ ಇಚ್ಚಂಗಿ

ನವಲಗುಂದ : ಹಿಂದಿನ ಕಾಲದಲ್ಲಿ ಅದು ಅಡುಗೆ ಮನೆಗೆ ಸಂಬಂದಿಸಿದಂತೆ ಗೃಹಿಣಿಯರಿಗೆ ಅತೀ ಅವಶ್ಯಕ ಇದ್ದದ್ದು, ಒಳಕಲ್ಲು, ಬೀಸುವಕಲ್ಲು ಹಾಗೂ ರೊಟ್ಟಿಕಲ್ಲುಗಳು ಆದರೆ ಈಗ ಅವುಗಳನ್ನು ಕೇಳುವವರೇ ಯಾರು ಇಲ್ಲದಂತಾಗಿ ಹೋಗಿದೆ. ಜನರು ಕಲ್ಲುಗಳನ್ನು ಖರೀದಿಸಲು ಈಗ ಬರ್ತಾರೆ ಆಮೇಲೆ ಬರ್ತಾರೆ ಎಂದು ಆಸೆಗಣ್ಣಿನಿಂದ ಕಾಯುತ್ತಾ ಕುಳಿತುಕೊಳ್ಳುವ ದುಸ್ಥಿತಿ ಭೋವಿ ಕಲ್ಲ ವಡ್ಡರ ಸಮುದಾಯಕ್ಕೆ ಬಂದಿದೆ...

ಪೂರ್ವಜರಿಂದ ಬಳುವಳಿಯಾಗಿ ಬಂದ ಕಸುಬಿನಿಂದ ಒಳಕಲ್ಲು, ರೊಟ್ಟಿಕಲ್ಲು, ಬೀಸುವ ಕಲ್ಲು ಹಾಗೂ ಕಡಬತ್ತಕಲ್ಲು ತಯಾರಿಸಿ, ಮಾರಾಟ ಮಾಡಿ ಭೋವಿ ಸಮುದಾಯದ ಕುಟುಂಬಗಳು ಜೀವನ ಸಾಗಿಸುತ್ತಿದ್ದವು. ಆದರೆ ಆಧುನಿಕ ಮಶೀನ್‌ಗಳ ಹೊಡೆತಕ್ಕೆ ಸಿಲುಕಿ ಈ ಕಸುಬು ಅವಸಾನದ ಅಂಚಿಗೆ ತಲುಪಿದೆ. ನವಲಗುಂದದ ಅಣ್ಣಿಗೇರಿ ರಸ್ತೆಯಲ್ಲಿರುವ ಪೊಲೀಸ್ ಕ್ವಾಟ್ರೇಸ್ ಪಕ್ಕದಲ್ಲಿ ಕಲ್ಲು ವಡ್ಡರ ಸಮುದಾಯ ಗುಡಿಸಲು ಮತ್ತು ಜೋಪಡಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಕಳೆದ 20 ವರ್ಷಗಳಿಂದ ಇಲ್ಲಿ ಇವರು ಬದುಕು ಸಾಗಿಸುತ್ತಿದ್ದು, ಆಧುನಿಕ ಮಶೀನ್‌ಗಳು ಬಂದು ಈಗ ಇವುಗಳನ್ನು ಕೊಳ್ಳುವವರೇ ಯಾರು ಇಲ್ಲದಂತಾಗಿದೆ. ವಾರದಲ್ಲಿ ಒಂದೊ ಎರಡೂ ಹೋದ್ರೆ ದೊಡ್ಡ ಮಾತು, ಒಂದು ಕಲ್ಲು ಮಾರಿದ್ರೆ ಐವತ್ತು ಅಥವಾ ನೂರು ರೂಪಾಯಿ ಸಿಗುತ್ತೆ, ಈ ಕಲ್ಲುಗಳನ್ನು ಗೋಕಾಕ್ ಇಂದ ತರ್ತೀವಿ, ಹೀಗೆ ಜೋಪಡಿಗಳಲ್ಲಿ ಇರ್ತೀವಿ, ಇಲ್ಲಿ ಮಾರಾಟ ಆಗದೆ ಹೋದ್ರೆ ನಾವು ಹಳ್ಳಿಗಳಿಗೆ ಹೊತ್ಕೊಂಡು ಹೋಗಿ ಮಾರ್ತೀವಿ, ಇಲ್ಲಾಂದ್ರೆ ಮಕ್ಕಳು ಭಿಕ್ಷೆ ಬೇಡಿ ತಂದದ್ದನ್ನೇ ತಿಂತೀವಿ ಅಂತಾ ಪಬ್ಲಿಕ್ ನೆಕ್ಸ್ಟ್ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು ಕಲ್ಲ ವಡ್ಡರ ಸಮುದಾಯದ ಯಮನಪ್ಪಾ...

ಈ ಕಸುಬನ್ನು ಬಿಟ್ರೆ ಬೇರೆ ಕೆಲಸವೆ ಬಾರದ ಇವರು ಈಗಿನ ಮಿಕ್ಸಿ, ಗ್ರೈಂಡರ್ ಮಧ್ಯ ಸಿಲುಕಿ ನಲುಗಿ ಹೋಗಿದ್ದಾರೆ. ಇವರ ಉಪ ಜೀವನದ ಕಲೆಯನ್ನು ಸರ್ಕಾರ ಗುರುತಿಸಿ ಉಳಿಸಿ, ಬೆಳೆಸಲು ಮುಂದಾಗ ಬೇಕಿದೆ. ಅವಸಾನದ ಅಂಚಿಗೆ ತಲುಪಿರುವ ಕಲ್ಲು ವಡ್ಡರ ಸಮುದಾಯದ ಕಸುಬಿಗೆ ಉತ್ತೇಜನ ನೀಡುವ ಕೆಲಸವನ್ನು ಸರಕಾರಗಳು ಮಾಡಬೇಕಿದೆ...

ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ...

Edited By : Manjunath H D
Kshetra Samachara

Kshetra Samachara

19/11/2020 05:09 pm

Cinque Terre

37.69 K

Cinque Terre

1

ಸಂಬಂಧಿತ ಸುದ್ದಿ