ಪಬ್ಲಿಕ್ ನೆಕ್ಸ್ಟ್ ವಿಶೇಷ ಪ್ರಶಾಂತ ಲೋಕಾಪುರ
ಧಾರವಾಡ : ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಎಲ್ಲ ಸಭೆ ಸಮಾರಂಭಗಳೂ ನಿಂತ ಪರಿಣಾಮ ಪಾತಳಕ್ಕೆ ಕುಸಿದಿದ್ದ ಹೂವಿನ ಬೆಲೆ ಹಬ್ಬದ ಆರಂಭದೊಂದಿಗೆ ಚೇತರಿಸಿಕೊಳ್ಳತೊಡಗಿದ್ದು, ಹೂವಿನ ಬೆಲೆ ಹೆಚ್ಚಾದರೆ.ಇನೊಂದೆಡೆ ಸಾಲು ಸಾಲು ಹಬ್ಬಕ್ಕೆ ಬಿಸಿ ತಟ್ಟಬಹುದಾ?
ಮುಂದೆ ಸಾಲು ಹಬ್ಬಗಳಿರುವ ಕಾರಣ ಹೂವಿನ ಬೆಲೆಯಲ್ಲಿ ಕಡಿಮೆಯಾಗುವುದಿಲ್ಲ ಎಂಬ ಕಾರಣಕ್ಕೆ ರೈತನ ಮುಖದಲ್ಲಿ ಮಂದಹಾಸ ಹೆಚ್ಚಿದ್ರೆ.
ಕಳೆದ ಮಾರ್ಚ್‌ನಿಂದ ಅಕ್ಟೋಬರ್ ವರೆಗೂ ಹೂ ಬೆಳೆಗಾರನ ಬದುಕು ಅಕ್ಷರಶಃ ತತ್ತರಿಸಿಹೊಗಿತ್ತು,
ಯಾವುದೇ ಕಾರ್ಯಕ್ರಮ ಇಲ್ಲದೆ,ಹೂವಿನ ಬೇಡಿಕೆಯೂ ಇಲ್ಲದೆ ಬೆಳೆದ ಹೂವನ್ನು ತಿಪ್ಪೆಗೆ ಹಾಕುವ ಸ್ಥಿತಿಗೆ ತಲುಪಿತ್ತು,ಸದ್ಯ ಸಾಲು ಸಾಲು ಹಬ್ಬಗಳು ಇರುವುದರಿಂದ ನಗರಕ್ಕೆ ಬೆಂಗಳೂರು ಸೇರಿದಂತೆ ಇತರ ಪ್ರದೇಶಗಳಿಂದ ಹೂ ಬರುತ್ತಿದ್ದು ಹೂವಿನ ಬೆಲೆ ಸ್ವಲ್ಪ ಚೇತರಿಸಿಕೊಳ್ಳುತ್ತಿದೆ.
ನವರಾತ್ರಿ ಹಬ್ಬದ ಸಂದರ್ಭದಲ್ಲಿ 200 ರೂಪಾಯಿ ಏರಿಕೆ ಕಂಡಿದ್ದ ಚೆಂಡು ಹೂ ಸದ್ಯ 70 ರೂಪಾಯಿಗೆ ಇದೆ.ಸೇವಂತಿಗೆ ಮತ್ತು ಚೆಂಡು ಹೂವು ಸ್ವಲ್ಪ ಬೆಲೆ ಇಳಿಕೆಯಾಗಿದ್ದು,ಇನ್ನು ಸಾಲು ಸಾಲು ಹಬ್ಬಗಳು ಇರುವುದರಿಂದ ಹಬ್ಬಕ್ಕೆ ಬೆಲೆ ಹೆಚ್ಚಳದ ಬಿಸಿ ತಟ್ಟುವ ನೀರಿಕ್ಷೆ ಇದೆ.
ಪಬ್ಲಿಕ್ ನೆಕ್ಸ್ಟ್ ಜೊತೆಗೆ ಹೂವುಗಳ ವ್ಯಾಪಾರಿ ಗಣೇಶ ತೆರದಾಳ ಮಾತನಾಡಿ,ಮುಂದಿನ ಒಂದು ವಾರ ದೀಪಾವಳಿ ಹಬ್ಬದ ಇರುವುದರಿಂದ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ. ನವರಾತ್ರಿ ಹಬ್ಬಕ್ಕೆ ಸ್ವಲ್ಪ ಚೇತರಿಕೆ ಕಂಡಿತ್ತು,ಈಗ ಸ್ವಲ್ಪ ದರ ಕಡಿಮೆಯಾಗಿದೆ ಮಾರುಕಟ್ಟೆಗೆ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹೂ ಬರುತ್ತಿದೆ.ಮುಂದೆ ಸಾಲು ಸಾಲು ಹಬ್ಬಗಳು ಬರುವುದರಿಂದ ಬೆಲೆ ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
Kshetra Samachara
10/11/2020 10:49 am