ಮಾನವನಷ್ಟೇ ಸ್ವಚ್ಚಂದವಾಗಿ ಈ ಭೂಮಿ ಮೇಲೆ ಬದುಕಲು ಎಲ್ಲ ಪ್ರಾಣಿ ಪಕ್ಷಿಗಳಿಗೂ ಹಕ್ಕಿದೆ ಆದ್ರೇ ಈ ಮಾನವ ತಿಳಿದು ತಿಳಿದು ಮಾಡುವ ಕೆಲವೊಂದು ಕೆಲಸಗಳಿಂದ ಇತರ ಪ್ರಾಣಿಗಳ ಬದುಕಿಗೆ ತೊಂದರೆ ಉಂಟಾಗುತ್ತೆ ಎಂಬುದನ್ನೇ ಮರೆತಿದ್ದಾನೆ.
ಇದಕ್ಕೊಂದು ಸಣ್ಣ ಉದಾಹರಣೆ ಎಂಬಂತೆ ನಮ್ಮ ನಿಮ್ಮ ಮನೆ ಮುಂದೆ ಹಿತ್ತಲಲ್ಲೋ ಚರಂಡಿ ಪಕ್ಕದಲ್ಲೋ ಆಹಾರವನ್ನು ಅರಸಿ ರಸ್ತೆ ಬದಿ ಬೆಳೆದ ಹುಲ್ಲು ಗಿಡಗಳನ್ನು ತಿನ್ನುವ ಹಸು ದನ ಕರುಗಳ ಜೀವದ ಬಗ್ಗೆ ನಾವು ಯೋಚಿಸದೆ ನಾವು ಬಳಸಿ ಎಲ್ಲೇಂದರಲ್ಲಿ ಬಿಸಾಡಿದ ಶೇವಿಂಗ್ ಸೆಟ್, ಬ್ಲೇಡ್, ಕ್ರೀಮ್, ಪ್ಲಾಸ್ಟಿಕ್ ಗಳು ದನ ಕರುಗಳು ಮೇಯುವಾಗ ಅದೆಷ್ಟೋ ದನ ಕರುಗಳ ಪ್ರಾಣಿ ಹಿಂಡಿದ್ದು ನಮ್ಗೇ ಗೊತ್ತಿಲ್ಲಾ ನೋಡಿ.
ಈ ಬ್ಲೇಡ್, ಸೇವಿಂಗ್ ಸೆಟ್ ಪ್ಲಾಸ್ಟಿಕ್ ಎಸೆಯುವ ಮಾನವರ ಬುದ್ಧಿ ತಿಳಿಯದೆ ರಸ್ತೆ ಬದಿ ಮೇಯುವ ಹಸುಗಳ ನೈಜ ದೃಶ್ಯ ಸೆರೆ ಹಿಡಿದು ಬಳಸಿ ಬಿಸಾಡಿದ ವಸ್ತುಗಳನ್ನ ಆಯ್ದು ಪರಿಸರ ಪ್ರೇಮಿ ಸುನೀಲ್ ನಮ್ಮಂತೆ ಸ್ವಚ್ಚಂದ ಪರಿಸರದಲ್ಲಿ ಬದುಕಲು ಹಸುಗಳಿಗೂ ಅನುಕೂಲ ಮಾಡಿ ಮನುಷ್ಯರು ಬಳಸಿ ಬಿಸಾಡಿದ ಹರಿತವಾದ ವಸ್ತು ಹೊರಗಡೆ ಎಸೆಯದಂತೆ ಮನವಿ ಇಟ್ಟಿದ್ದಾನೆ.
Kshetra Samachara
10/11/2020 08:56 am