ಕುಂದಗೋಳ : ಕೊರೊನಾ ವೈರಸ್ ಬೀತಿಯಲ್ಲಿ ಬಾಗಿಲು ಹಾಕಿದ ಕಾಲೇಜುಗಳು ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಿದ್ದರೂ ತರಗತಿಗಳನ್ನು ಆರಂಭಿಸಿಲ್ಲ ಸತತ ಕೊರೊನಾ ಆರಂಭವಾದಾಗಿನಿಂದ ಆರು ತಿಂಗಳು ಕಾಲ ಮನೇಲಿ ಕೂತು ಕಾಲ ಕಳೆದ ವಿದ್ಯಾರ್ಥಿಗಳು ಸಧ್ಯ ತರಬೇತಿ ಶಿಕ್ಷಣ ಸಂಸ್ಥೆಗಳತ್ತ ವಾಲುತ್ತಿದ್ದು ಸ್ವಂತ ಉದ್ಯೋಗದ ಭರವಸೆ ಕನಸನ್ನು ಹೊತ್ತಿದ್ದಾರೆ.
ಕೊರೊನಾ ವೈರಸ್ ಅಟ್ಟಹಾಸದಿಂದ ಆರ್ಥಿಕವಾಗಿ ಬೆಂದ ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ತರಬೇತಿ ಶಿಕ್ಷಣ ಸಂಸ್ಥೆಗಳು ಕೈ ಹಿಡಿದಿದ್ದು ಬ್ಲೌಸ್ ಡಿಸೈನರ್, ಚೂಡಿದಾರ್, ಶರ್ಟ್, ಲಹೇಂಗಾ ಚೂಡಿ, ಬೇಬಿ ಪ್ರಾಕ್ಸ್ ತಯಾರಿ ಸೇರಿದಂತೆ ಅನೇಕ ತರಬೇತಿಗಳ ಜೊತೆ ಸರ್ಟಿಫಿಕೇಟ್ ಸಹ ನೀಡುತ್ತಿದ್ದು ಕಾಲೇಜು ಆರಂಭದವರೆಗೆ ಮನೆಯಲ್ಲಿ ಸುಮ್ಮನೆ ಕಾಲ ಕಳೆಯುವ ಬದಲಾಗಿ ಹೆಣ್ಣು ಮಕ್ಕಳು ಈ ತರಬೇತಿಗೆ ಅಣಿಯಾಗಿದ್ದಾರೆ.
ಕುಂದಗೋಳ ತಾಲೂಕಿನ ಸುತ್ತ ಹಳ್ಳಿಯ ಹೆಣ್ಣು ಮಕ್ಕಳು ಕುಂದಗೋಳ ಪಟ್ಟಣದ ರೇಣುಕಾ ಶಿಕ್ಷಣ ಸಂಸ್ಥೆ ಮತ್ತು ತರಬೇತಿ ಕೇಂದ್ರದಲ್ಲಿ ಪ್ರತಿ ಶಿಫ್ಟ್ 30 ವಿದ್ಯಾರ್ಥಿಗಳಂತೆ ತರಬೇತಿ ಪಡೆಯುತ್ತಿದ್ದು ಈ ತರಬೇತಿಯ ಜೊತೆ ಸ್ವಂತ ಉದ್ಯೋಗ ಮಾಡುವ ಅಭಿಲಾಷೆ ವ್ಯಕ್ತಪಡಿಸಿದ್ದು ಕೊರೊನಾ ವೈರಸ್ ಮತ್ತು ಅತಿವೃಷ್ಟಿ ಕಾರಣ ಕುಗ್ಗಿ ಹೋಗಿರುವ ಗ್ರಾಮೀಣ ಕುಟುಂಬಗಳಿಗೆ ತಾವೇ ಆಸರೆಯಾಗಲು ಮುಂದಾಗಿ ತರಬೇತಿ ಸಂಸ್ಥೆಯಲ್ಲಿ ಕೊರೊನಾ ಕಾರಣ ಸಾಮಾಜಿಕ ಅಂತರ, ಮಾಸ್ಕ್ ಸ್ಯಾನಿಟೈಜರ್ ಬಳಕೆಯ ಜೊತೆ ಕೋವಿಡ್ ಟೆಸ್ಟ್ ಗೂ ಒಳಗಾಗಿದ್ದಾರೆ.
Kshetra Samachara
06/11/2020 02:37 pm