ಅಣ್ಣಿಗೇರಿ: ಇಳೆಯಲ್ಲಿ ಉತ್ತಮ ಬೆಳೆ, ಬೆಳೆಗೆ ತಕ್ಕ ಬೆಲೆ ಯಾರಿಗೆ ಬೇಡಾ ಹೇಳಿ ? ಇಂತಹ ಬೆಳೆ ಬೆಲೆ ಎರಡಕ್ಕೂ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ಕಾರಣವಾಗಿದ್ದು ಅದೆಷ್ಟೋ ರೈತರು ನಮಗೂ ಕೃಷಿಹೊಂಡ ಬೇಕು ಎನ್ನುತ್ತಿದ್ದಾರೆ.
ಅಣ್ಣಿಗೇರಿ ತಾಲೂಕಿನ ಬಸಾಪೂರ ಗ್ರಾಮದ ಉತ್ಸಾಹಿ ರೈತ ಹಸನಸಾಬ್ ಅಲ್ಲಿಸಾಬ್ ಚಾಹುಸೇನ್ ಕೃಷಿಹೊಂಡ ಆಶ್ರಿತ ಬೇಸಾಯಕ್ಕೆ ಮನಸೋತು ತಾವು ಸಹ ತಮ್ಮ 2 ಎಕರೆ ಜಮೀನಿನಲ್ಲಿ 120/120 ಕೃಷಿಹೊಂಡ ನಿರ್ಮಿಸಿಕೊಳ್ಳಲು ಮುಂದಾಗಿದ್ದಾರೆ.
ಈಗಾಗಲೇ ಒಣಬೇಸಾಯದ ಕೃಷಿ ಕಾಯಕ ಅನುಸರಿಸಿದ್ದ ಹಸನಸಾಬ್ ಮಳೆ ಆಶ್ರಿತ ಹತ್ತಿ, ಗೋಧಿ, ಜೋಳ, ಈರುಳ್ಳಿ ಬೆಳೆ ಬೆಳೆದು ಇದೇ ಕೃಷಿಹೊಂಡ ಆಶ್ರಿತ ಪ್ರಯೋಗದ ಮೂಲಕ ಉತ್ತಮ ಬೆಳೆ ಬೆಳೆಯಲು ಮುಂದಾಗಿದ್ದಾರೆ.
ಒಟ್ಟಾರೆ ಅಣ್ಣಿಗೇರಿ ತಾಲೂಕಿನಲ್ಲಿ ಈಗಾಗಲೇ ಕೃಷಿಹೊಂಡ ಆಶ್ರಿತ ಬೇಸಾಯದ ಮೂಲಕ ರೈತರ ಬಾಳಲ್ಲಿ ಹೊಸ ಆದಾಯದ ಸಂತೋಷ ಗರಿಗೆದರಿದ್ದು, ಆ ಖುಷಿಯನ್ನು ತಮ್ಮದಾಗಿಸಿಕೊಳ್ಳಲು ರೈತ ಹಸನಸಾಬ್ ಸಹ ಮುಂದಾಗಿದ್ದಾರೆ.
Kshetra Samachara
16/04/2022 07:43 pm